ಮಂಗಳೂರು,ಆ. 11 (DaijiworldNews/AK): ಶಕ್ತಿ ವಿದ್ಯಾಸಂಸ್ಥೆ, ಮಂಗಳೂರು ಇದರ ಸಹಯೋಗದೊಂದಿಗೆ ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಈಜು ಸ್ಪರ್ಧೆಯ ಬಾಲಕಿರ ವಿಭಾಗದಲ್ಲಿ ಬಂಟ್ವಾಳದ ಕಲ್ಲಡ್ಕ ಶ್ರೀ ರಾಮ ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಸಾಧನೆ ಪ್ರದರ್ಶಿಸಿದ್ದಾರೆ.
https://daijiworld.ap-south-1.linodeobjects.com/Linode/img_tv247/11-08-2025akswimfineal.jpg
17ರ ಹರೆಯದ ವಿಭಾಗದಲ್ಲಿ 10ನೇ ತರಗತಿಯ ಅನರ್ಘ್ಯ ಎ.ಆರ್. ಅವರು ಭಾಗವಹಿಸಿ 200 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ 200 ಮೀ ಮತ್ತು 400 ಮೀ. ವೈಯಕ್ತಿಕ ಮೆಡ್ಲೆಗಳಲ್ಲಿ ಚಿನ್ನದ ಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅವರು ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ ಪೆಕ್ಟರ್ ಬಿ.ಕೆ ನಾಯಕ್ ಇವರ ಶಿಷ್ಯರಾಗಿದ್ದು ಮಂಗಳೂರಿನ ಸೈಂಟ್ ಅಲೋಶಿಯಸ್ ಈಜುಕೊಳದ ಮುಖ್ಯ ತರಬೇತುದಾರರಾದ ಲೋಕರಾಜ್ ವಿಟ್ಲ ಮತ್ತು ವಿನೋದ್ ಕಾರವಾರ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.
ಈಜು ಸ್ಪರ್ಧೆಯ 14ರ ವಯೋಮಾನದ ಬಾಲಕಿರ ವಿಭಾಗದಲ್ಲಿ ಕಲ್ಲಡ್ಕ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ಅನನ್ಯ ಎ.ಆರ್ ಇವರು ಭಾಗವಹಿಸಿ 200 ಮೀಟರ್ ಬಟರ್ ಫ್ಲೈ ಮತ್ತು 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ಚಿನ್ನದ ಪದಕ, 100 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ಬೆಳ್ಳಿಯ ಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.