ಸುಳ್ಯ,ಆ. 11 (DaijiworldNews/AK): ಚೆಂಬು ಗ್ರಾಮದ ದಬ್ಬಡ್ಕದಲ್ಲಿ ರೈತನ ಪ್ರಾಣ ತೆಗೆದ ಪುಂಡಾನೆಯನ್ನು ಅರಣ್ಯ ಇಲಾಖೆ ತಕ್ಷಣ ಸೆರೆ ಹಿಡಿದು ಸ್ಥಳಾಂತರಿಸಬೇಕು,ಆನೆಯನ್ನು ಸೆರೆ ಹಿಡಿಯದಿದ್ದರೆ ಪ್ರತಿಭಟನೆ ನಿಲ್ಲದು ಎಂದು ಮಾಜಿ ಸ್ವೀಕರ್ ಕೆ.ಜಿ ಬೋಪಯ್ಯ ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.

ಅವರು ಕಳೆದ ವಾರ ಚೆಂಬು ಗ್ರಾಮದ ದಬ್ಬಡ್ಕ ಕೊಪ್ಪದಲ್ಲಿ ಕೃಷಿಕರೊಬ್ಬರನ್ನು ಪುಂಡಾನೆ ತುಳಿದು ಕೊಂದಿರುವ ಹಿನ್ನಲೆಯಲ್ಲಿ ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿ ಸಂಪಾಜೆ ವಲಯಾರಣ್ಯಧಿಕಾರಿ ಕಚೇರಿ ಎದುರು ಸೋಮವಾರ ಕೊಡಗು ಸಂಪಾಜೆ ಹೋಬಳಿ ನಾಗರೀಕ ಹಿತಾರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭನೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಾಗರೀಕರ ಜೀವದ ಜೊತೆ ಅರಣ್ಯ ಇಲಾಖೆ ಚೆಲ್ಲಾಟ ಆಡುವುದು ಸರಿಯಲ್ಲ.ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ.ಕಾಡಾನೆ ಸೆರೆ ಹಿಡಿದು ಸ್ಥಳಾಂತರಿಸಲು ಕೇಂದ್ರ ಸರಕಾರದ ಅನುಮತಿಗಾಗಿ ಕಾಯಬೇಕಾಗಿಲ್ಲ.ಕಾನೂನಿನಲ್ಲಿ ಬೇರೆ ರೀತಿಯ ಅವಕಾಶವಿದೆ ಎಂದು ಹೇಳಿದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಡಿ.ಎಫ್.ಒ ಅಭಿಷೇಕ್ ಮಾತನಾಡಿ ಕಾಡಾನೆ ಸೆರೆ ಹಿಡಿದು ಸ್ಥಳಾಂತರಿಸಲು ನಮಗೆ ಅನುಮತಿ ದೊರಬೇಕಾಗಿದೆ.ಇವತ್ತು ಅನುಮತಿ ದೊರೆಯಬಹುದು. ಕಾಡಾನೆಗಳ ಚಲವಲನದ ಬಗ್ಗೆ ಈಗಾಗಲೇ ನಮ್ಮ ನುರಿತ ತಂಡದವರು ನಿಗಾ ಇರಿಸಿದ್ದಾರೆ. ಕಾಡಾನೆ ಸೆರೆ ಹಿಡಿಯಲು ಅವಕಾಶ ಸಿಕ್ಕಿದ ಕೂಡಲೇ ಕಾಡಾನೆ ಸೆರೆ ಹಿಡಿಯುವ ಕೆಲಸಕ್ಕೆ ಚಾಲನೆ ದೊರೆಯಲಿದೆ ಎಂದು ಹೇಳಿದರು.
ಎ.ಸಿ.ಎಫ್ ಸೆಂಥಿಲ್ ಕುಮಾರ್ ಬಿಜೆಪಿ ಕೊಡಗು ಜಿಲ್ಲಾ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ, ಮಡಿಕೇರಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್ ಸಿ ಅನಂತ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಮಾದೇವಿ ಕಳಗಿ, ಚೆಂಬು ಗ್ರಾಮ ಪಂಚಾಯತ್ ಅಧ್ಯಕ್ಷ ತೀರ್ಥರಾಮ ಪೂಜಾರಿಗದ್ದೆ, ಪೆರಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಂಜಪ್ಪ, ಸೊಸೈಟಿ ಉಪಾಧ್ಯಕ್ಷ ಯಶವಂತ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮೀನಾಕ್ಷಿ ನಿರ್ದೇಶಕರು ನಾಗಾರೀಕರು ಉಪಸ್ಥಿತರಿದ್ದರು.