ಬಂಟ್ವಾಳ, ಆ. 12 (DaijiworldNews/AA): ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಮಾಸಿಕ ಸಭೆಯು ಬೂಡಾ ಅಧ್ಯಕ್ಷ ಬೇಬಿ ಕುಂದರ್ ಅವರ ಅದ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಇತ್ತೀಚಿನ 9&11 ಗೊಂದಲಗಳನ್ನು ನಿವಾರಿಸುವ ಬಗ್ಗೆ ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತ್ ಅಧ್ಯಕ್ಷರ ಜಂಟಿ ಸಭೆಯನ್ನು ಕರೆದು ಚರ್ಚಿಸುವಂತೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಬಂಟ್ವಾಳ ಕಸಬಾ ಗ್ರಾಮದ ಗಿರಿಗುಡ್ಡೆ ಕೆರೆ ಅಭಿವೃದ್ಧಿ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಕಡತವನ್ನು ಕಳುಹಿಸಿಕೊಡಲು ನಿರ್ಣಯಿಸಲಾಯಿತು. ಬುಡಾ ಸದಸ್ಯರಾದ ಮನೋಹರ್ ಕುಲಾಲ್, ಅಬ್ದುಲ್ ರಜಾಕ್, ಹರೀಶ್ ಅಜ್ಜಿಬೆಟ್ಟು, ಅಮ್ಟಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲದಾಸ್ ಭಕ್ತ, ನರಿಕೊಂಬು ಪಂಚಾಯತ್ ಅಧಿಕಾರಿ ಹರೀಶ್, ಪುರಸಭಾ ಪ್ರತಿನಿಧಿ ಅಬ್ದುಲ್ ರಜಾಕ್, ಯೋಜನಾ ಸದಸ್ಯ ಕಾರ್ಯದರ್ಶಿ ಗಾಯತ್ರಿ ಡೊಂಬರ ಉಪಸ್ಥಿತರಿದ್ದರು.