ಮಂಗಳೂರು: 79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆ.15-17ರವರೆಗೆ ಮಾನಸ ವಾಟರ್ ಪಾರ್ಕ್ ನಲ್ಲಿ ಫ್ರೀಡಂ ಫೆಸ್ಟ್-2025
Wed, Aug 13 2025 09:41:54 AM
ಮಂಗಳೂರು, ಆ. 13 (DaijiworldNews/AA): ಮಂಗಳೂರಿನ ವಾಮಂಜೂರಿನಲ್ಲಿರುವ ಮಾನಸ ವಾಟರ್ ಪಾರ್ಕ್ನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆ.15ರಿಂದ 17ರವರೆಗೆ ಫ್ರೀಡಂ ಫೆಸ್ಟ್-2025 ಅನ್ನು ಆಯೋಜಿಸಲಾಗಿದೆ.
ಪ್ರವಾಸಿಗರಿಗೆ ಹಲವು ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ಮಾನಸ ವಾಟರ್ ಪಾರ್ಕ್ ಪ್ರವಾಸಿಗರನ್ನು ತನ್ನತ್ತ ಆಕಷಿಸುತ್ತಿದ್ದು, ಇದೀಗ ಫ್ರೀಡಂ ಫೆಸ್ಟ್-2025 ಅನ್ನು ಆಯೋಜಿಸಿ ವಿಶೇಷ ಆಫರ್ಗಳನ್ನು ನೀಡುತ್ತಿದೆ. ಫ್ರೀಡಂ ಫೆಸ್ಟ್-2025ರಲ್ಲಿ ಪಾರ್ಕ್ ಎಂಟ್ರಿ ಕೇವಲ 299 ರೂ. ಗಳ ಇದ್ದು, ಈ ಆಫರ್ ಆ.15, 16, 17ರಂದು ಮಾನಸ ವಾಟರ್ ಪಾರ್ಕ್ನಲ್ಲಿ ಸಿಗಲಿದೆ.
ಈಗಾಗಲೇ ಮಾನಸ ವಾಟರ್ ಪಾರ್ಕ್ನಲ್ಲಿ ವಿವಿಧ ಪ್ರಕಾರಗಳ ನೀರಾಟಗಳ ಮೂಲಕ ಜನರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ವಾಟರ್ ರೈಡ್, ಮ್ಯೂಸಿಕಲ್ ಫೌಂಟೇನ್, ರೈನ್ ಡ್ಯಾನ್ಸ್, ವೇವ್ ಪೂಲ್, ಸ್ಲೈಡ್ಸ್, ಸ್ಕೈ ಸೈಕ್ಲಿಂಗ್ ಸೇರಿದಂತೆ ವಿವಿಧ ಪ್ರಕಾರಗಳ ನೀರಾಟಗಳು ಪ್ರವಾಸಿಗರ ಮನಸೂರೆಗೊಂಡಿದೆ.
ಈ ಬಾರಿಯ 79ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆ.15ರಿಂದ 17ರವರೆಗೆ ಫ್ರೀಡಂ ಫೆಸ್ಟ್-2025 ಅನ್ನು ಆಯೋಜಿಸಿ ಜನರನ್ನು ಮನರಂಜಿಸಲಿದೆ. ಹೆಚ್ಚಿನ ಮಾಹಿತಿಗಾಗಿ 7022024365 ಅನ್ನು ಸಂಪರ್ಕಿಸಬಹುದಾಗಿದೆ.