ಕುಂದಾಪುರ, ಆ. 14 (DaijiworldNews/TA): ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೊಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂದಾಪುರದ ಕಟ್ಬೆಲ್ತೂರು ಎಂಬಲ್ಲಿ ನಡೆದಿದೆ. ಮೃತರನ್ನು ಕಟ್ಬೆಲ್ತೂರು ಗ್ರಾಮದ ನಾಗರಾಜ(48) ಎಂದು ಗುರುತಿಸಲಾಗಿದೆ.

ಇವರು ಮಳೆಗಾಲದಲ್ಲಿ ಕೆಲಸವಿಲ್ಲದೇ ಇರುವುದರಿಂದ ಆ.12ರಂದು ಬೆಳಗ್ಗೆ ಮೀನು ಹಿಡಿಯಲು ಹೋಗಿದ್ದು, ಸಂಜೆಯಾದರೂ ವಾಪಾಸು ಬಾರದೇ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಆ.13ರಂದು ಬೆಳಗ್ಗೆ ನಾಗರಾಜ ಅವರ ಮೃತದೇಹವು ಕಟ್ಬೆಲ್ತೂರು ಗ್ರಾಮದ ಸಿಗಡಿ ಕೆರೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.