ಕಡಬ, ಆ. 17 (DaijiworldNews/AA): ಇದೇ ಮೊದಲ ಬಾರಿಗೆ ಕಡಬ ಪಟ್ಟಣ ಪಂಚಾಯತ್ ಚುನಾವಣೆಯು ನಡೆಯುತ್ತಿದ್ದು, ಮುಂಜಾನೆ 7 ಗಂಟೆಯಿಂದ 11 ಗಂಟೆಯ ವೇಳೆಗೆ ಶೇ.35 ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.


ವಾರ್ಡ್ ವಾರು ಶೇ. ಮತದಾನ ಪ್ರಕಾರ ಕಳಾರ ಶೇ.32.47, ಕೋಡಿಬೈಲು ಶೇ. 36.46, ಪನ್ಯ 42.86, ಬೆದ್ರಾಜೆ 45.36, ಮಾಲೇಶ್ವರ 32.65, ಕಡಬ 34.54, ಪಣೆಮಜಲು 39.95, ಪಿಜಕಳ 40.88 ಮೂರಾಜೆ 38.1, ದೊಡ್ಡಕೊಪ್ಪ. 30.66, ಕೋಡಿಂಬಾಳ 36.38, ಮಜ್ಕಾರು 29.57 ಪುಳಿಕುಕ್ಕು 28.38 ಮತದಾನವಾಗಿದೆ.