ಕಾಸರಗೋಡು, ಆ. 17 (DaijiworldNews/TA): ಚಲಿಸುತ್ತಿದ್ದ ಲಾರಿಯಿಂದ ಸಿಎನ್ಜಿ ಅನಿಲ ಸೋರಿಕೆಯಾದ ಘಟನೆ ಶನಿವಾರ ಸಂಜೆ ಕಾಸರಗೋಡಿನ ಬೇಕಲ ಸಮೀಪ ತೃಕ್ಕನ್ನಾಡು ಎಂಬಲ್ಲಿ ನಡೆದಿದೆ. ಗ್ಯಾಸ್ ಸೋರಿಕೆ ಹಿನ್ನೆಲೆಯಲ್ಲಿ ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.



ಕಣ್ಣೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಲಾರಿಯಲ್ಲಿದ್ದ ಸಿಎನ್ಜಿ ಸಿಲಿಂಡರ್ ನಿಂದ ಅನಿಲ ಸೋರಿಕೆ ಉಂಟಾಗಿತ್ತು. ಸೋರಿಕೆ ಗಮನಕ್ಕೆ ಬರುತ್ತಿದ್ದಂತೆ ಚಾಲಕ ಲಾರಿ ರಸ್ತೆ ಬದಿ ನಿಲುಗಡೆ ಗೊಳಿಸಿ ಅಗ್ನಿಶಾಮಕ ದಳದ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಎರಡು ಘಟಕಗಳು ಅನಿಲ ಸೋರಿಕೆ ತಡೆಗಟ್ಟಿ ಭಾರೀ ಅಪಾಯ ತಪ್ಪಿಸಿದರು.