ಬಂಟ್ವಾಳ, ಜೂ 26 (Daijiworld News/SM): ಹೆತ್ತವರಿಗೆ ತನ್ನನ್ನು ಹುಡುಕದಂತೆ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಬಂಟ್ವಾಳದ ನರಿಕೊಂಬು ಗ್ರಾಮದ ವಿದ್ಯಾರ್ಥಿನಿ ರಿಮಾ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಸುರಕ್ಷಿತವಾಗಿದ್ದಾಳೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ಆಕೆ ಬೆಂಗಳೂರಿನ ಮೆಜಸ್ಟಿಕ್ ನಲ್ಲಿ ಪತ್ತೆಯಾಗಿದ್ದು, ಬಳ್ಳಾರಿಗೆ ತೆರಳಲು ಯೋಜನೆ ಹಾಕಿಕೊಂಡಿದ್ದಳು ಎಂದು ತಿಳಿದುಬಂದಿದೆ. ಆಕೆಯನ್ನು ಮರಳಿ ಕರೆತರಳು ಪೊಲೀಸರು ಹಾಗೂ ಪೋಷಕರು ಬೆಂಗಳೂರಿಗೆ ತೆರಳಿದ್ದಾರೆ.
ಪ್ರಕರಣದ ಹಿನ್ನೆಲೆ:
ವಿನೀಶ ರೀಮಾ ಮಿನೇಜಸ್, ಪತ್ರ ಬರೆದು ಮನೆಬಿಟ್ಟು ತೆರಳಿದ ವಿದ್ಯಾರ್ಥಿನಿಯಾಗಿದ್ದಾಳೆ. ನರಿಕೊಂಬು ಗ್ರಾಮದ ಪೊಯಿತ್ತಾಜೆಯ ವಿನ್ಸೆಂಟ್ ಹಾಗೂ ರೀಟಾ ಮಿನೇಜಸ್ ದಂಪತಿಗಳ ಪುತ್ರಿಯಾಗಿರುವ ವಿನೀಶ ರೀಮಾ ಮೊಡಂಕಾಪು ಬಳಿಯ ಕಾಲೇಜಿನ ವಿದ್ಯಾರ್ಥಿಯಾಗಿದ್ದಳು. ಕಾಲೇಜಿಗೆ ತೆರಳಿದ ಆಕೆ ಮನೆಗೆ ಹಿಂತಿರುಗಿರಲಿಲ್ಲ. ನಾಪತ್ತೆಯಾದ ಸಂದರ್ಭ ಕಾಲೇಜಿನ ಸಮವಸ್ತ್ರ ಧರಿಸಿದ್ದಳು ಎಂದು ತಿಳಿದುಬಂದಿದೆ.
ಮನೆಯಲ್ಲಿದ್ದ ಪತ್ರದಲ್ಲಿ ಹೆತ್ತವರಿಗೆ ತನ್ನನ್ನು ಹುಡುಕದಂತೆ, ಹಾಗೂ ತನ್ನ ತಂಗಿ ಬಳಿ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಪತ್ರ ಬರೆದಿಟ್ಟು ಜೂ. 25 ರ ಮಂಗಳವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿದೆ.