ಉಡುಪಿ, ಜೂ 27 (Daijiworld News/MSP): ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷ್ಯಗಳ ವಿಚಾರಣೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ಜೂ. 26 ರ ಬುಧವಾರ ಮತ್ತೆ ಆರಂಭಗೊಂಡಿದೆ.
ಪ್ರಕರಣದ ತನಿಖಾ ತಂಡದಲ್ಲಿ ಇದ್ದಂತಹ ಸಿಐಡಿಯ ನಿವೃತ್ತ ಡಿವೈಎಸ್ಪಿ ಪಿ.ವಿ.ಎಂ. ಸ್ವಾಮಿ, ಡಿವೈಎಸ್ಪಿ ಎಸ್.ಬದರಿನಾಥ್ ಅವರ ಮುಖ್ಯ ವಿಚಾರಣೆ ಯನ್ನು ವಿಶೇಷ ಸರಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ ಅವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದುಕೊಳ್ಳಲಾಯಿತು.
ಈ ಸಂದರ್ಭ ವಿಧಿ ವಿಜ್ಞಾನ ಪ್ರಯೋಗಾಲಯದ ಮಂಗಳೂರು ಪ್ರಾದೇಶಿಕ ಅಧಿಕಾರಿ ಕುಮುದಾ ಅವರನ್ನು ಆರೋಪಿ ಪರ ವಕೀಲರು ಪಾಟಿ ಸವಾಲಿಗೆ ಒಳಪಡಿಸಿದರು. ಈ ಸಂದರ್ಭದಲ್ಲಿ ಆರೋಪಿ ರಾಜೇಶ್ವರಿ ಶೆಟ್ಟಿ ನ್ಯಾಯಾಲಯದಲ್ಲಿ ಹಾಜರಿ ದ್ದರು. ಆರೋಪಿಗಳಾದ ಪುತ್ರ ನವನೀತ್ ಶೆಟ್ಟಿ ಹಾಗೂ ನಂದಳಿಕೆ ನಿರಂಜನ್ ಭಟ್ ವಿಡಿಯೋ ಅವರು ಕಾನ್ಫರೆನ್ಸ್ ಮೂಲಕ ವಿಚಾರಣೆ ಎದುರಿಸಿದರು. ಗುರುವಾರವೂ ಸಾಕ್ಷಿಗಳ ವಿಚಾರಣೆ ನಡೆಯಲಿದೆ.