ಬಂಟ್ವಾಳ, ಆ. 23 (DaijiworldNews/AA): ಅಲ್ ವಫಾ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ 15 ಜೋಡಿಗಳ ಸರಳ ಸಾಮೂಹಿಕ ವಿವಾಹ ಸಮಾರಂಭವು ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ನಲ್ಲಿ ಶನಿವಾರ ನಡೆಯಿತು.





ಅಲ್ ವಫಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಎಸ್.ವೈ.ಎಸ್ ಜಿಲ್ಲಾ ಉಪಾಧ್ಯಕ್ಷ ಮೌಲಾನಾ ಸಿರಾಜುದ್ದೀನ್ ಸಖಾಫಿ ಉದ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ ಸಂದೇಶ ಭಾಷಣಗೈದರು.
ಉದ್ಯಮಿಗಳಾದ ವಿ.ಕೆ. ಅಬ್ದುಲ್ ಖಾದರ್ ಬದ್ರಿಯಾ, ಅಬ್ದುಲ್ ರಹಿಮಾನ್ ಕರ್ನಿರೆ, ಎಂ.ಫ್ರೆಂಡ್ಸ್ ಸ್ಥಾಪಕ ರಶೀದ್ ವಿಟ್ಲ ಶುಭ ಹಾರೈಸಿದರು.
ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಪಿ.ಮಹಮ್ಮದ್ ಹಾಜಿ, ಟ್ರಸ್ಟ್ ನ ಕೋಶಾಧಿಕಾರಿ ಎಫ್.ಎಂ.ಬಶೀರ್ ಫರಂಗಿಪೇಟೆ, ಟ್ರಸ್ಟಿಗಳಾದ ಇಸ್ಮಾಯಿಲ್ ಹಾಜಿ ಕಂಬಳಬೆಟ್ಟು, ಪಿ.ಮಹಮ್ಮದ್ ಪಾಣೆಮಂಗಳೂರು, ಹಮೀದ್ ಅತ್ತೂರು, ಸಿರಾಜ್ ಪುತ್ತೂರು, ಮಜೀದ್ ಪಿ.ಪಿ. ಬಂದರ್, ಶಕೂರ್ ಹಾಜಿ ಕಲ್ಲೇಗ, ಮುಹಮ್ಮದ್ ಬೆಳ್ಳಚ್ಚಾರ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ನೂತನ ವಧುವಿಗೆ 3 ಪವನ್ ಚಿನ್ನ ಹಾಗೂ ವಸ್ತ್ರ, ವರರಿಗೆ ವಸ್ತ್ರ, ವಾಚು, ಹಾರ ಹಾಗೂ ಸಹಾಯ ಧನ ನೀಡಲಾಯಿತು.
ಟ್ರಸ್ಟ್ ನ ಕಾರ್ಯದರ್ಶಿ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್.ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟ್ ನ ಕಾರ್ಯದರ್ಶಿ ಉಮರ್ ಯು.ಎಚ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಟ್ರಸ್ಟಿಗಳಾದ ಕೆ.ಎಸ್.ಅಬೂಬಕ್ಕರ್ ವಂದಿಸಿ, ಮುಹಮ್ಮದ್ ಅಲಿ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು.