ಮಂಗಳೂರು, ಆ. 23 (DaijiworldNews/AA): ಬೋಂದೆಲ್ ನ ಬೀದಿ ಬದಿ ಮಹಿಳಾ ಹೂವಿನ ವ್ಯಾಪಾರಿಯ ಆತ್ಮಹತ್ಯೆ ಯತ್ನಕ್ಕೆ ಕಾರಣದವರ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು), ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ನೇತೃತ್ವದಲ್ಲಿ ಮಂಗಳೂರಿನ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಯಿತು.


ಆತ್ಮಹತ್ಯೆಗೆ ಯತ್ನಿಸಿದವರನ್ನು ಶಾಲಿನಿ (48) ಎಂದು ಗುರುತಿಸಲಾಗಿದೆ.
ಶಾಲಿನಿ ಅವರು ನಗರದ ಬೋಂದೆಲ್ ಜಂಕ್ಷನ್ ಬಳಿ ಏರ್ ಪೋರ್ಟ್ ರಸ್ತೆಯಲ್ಲಿ ಹೂ ಮಾರಾಟದ ಸಣ್ಣ ಅಂಗಡಿ ಹೊಂದಿದ್ದರು. ಶಾಲಿನಿ ಅವರು ಆತ್ಮಹತ್ಯೆಗೆ ಶುಕ್ರವಾರ ಯತ್ನಿಸಿದ್ದರು. ತಕ್ಷಣ ಅವರನ್ನು ಸಾರ್ವಜನಿಕರು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.