ಉಡುಪಿ ಡಿ 8 : ಸಿ ಎಂ ಸಿದ್ದರಾಮಯ್ಯ ಹಿಂದೂ ವಿರೋಧಿ ಮುಖ್ಯಮಂತ್ರಿ ಎಂದು ಉಡುಪಿ ಚಿಕ್ಕಮಂಗಳೂರು ಸಂಸದೆ ಶೋಭಾ ಕರದ್ಲಾಂಜೆ ಅವರು ಟೀಕಿಸಿದ್ದಾರೆ. ಅವರು ಇಂದು ಮಣಿಪಾಲದ ರಜತಾದ್ರಿಯಲ್ಲಿರುವ ತಮ್ಮ ಕಚೇರಿಯಲ್ಲಿ ಈ ಬಗ್ಗೆ ಮಾತನಾಡಿದ್ರು, ಭಟ್ಕಳ ವಿಧಾನ ಪರಿಷತ್ ಹೊನ್ನವಾರದಲ್ಲಿ ಈದ್ ದಿನಾಚರಣೆ ಹಿಂದಿನ ದಿನ ಕೋಮುಗಲಭೆ ನಡೆದಿದೆ. ಹಿಂದೂ ದೇವಸ್ಥಾನಕ್ಕೆ ಮುಸ್ಲೀಂ ಸಮುದಾಯದಿಂದ ಕಲ್ಲು ತೂರಾಟ ನಡೆದಿವೆ. ಈ ಕೃತ್ಯವನ್ನು ವಿರೋದಿಸಿದ ಹಿಂದೂ ಕಾರ್ಯಕರ್ತರ ಮೇಲೆ ಮಚ್ಚು ಬೀಸಿ ಹಲ್ಲೆ ನಡೆಸುವ ಯತ್ನ ನಡೆದಿದೆ. ಹಿಂದೂ ಕಾರ್ಯಕರ್ತ ಪರಮೇಶ್ ಮೇಸ್ತಾ ಎಂಬರ ಕೊಲೆ ನಡೆದಿದೆ. ಆದ್ರೆ ಪೋಲಿಸ್ ಇಲಾಖೆ ಮಾತ್ರ ಈವರೆಗೆ ಹಲ್ಲೆ ಹಾಗೂ ಕೊಲೆಗೆ ಕಾರಣರಾದ ಶಕ್ತಿಗಳನ್ನು ಬಂದಿಸಿಲ್ಲ. ಈ ಮದ್ಯೆ ಸಿ ಎಂ ಅವರು ಸರಕಾರಿ ಕಾರ್ಯಕ್ರಮಕ್ಕೆ ಭಾಗವಹಿಸಿದ್ದು ಪೋಲಿಸರು ಪರಮೇಶ್ ಮೇಸ್ತಾ ಅವರ ಸಾವಿನ ನಿಗೂಡತೆಯನ್ನು ಮುಚ್ಚಿಟ್ಟಿದ್ದಾರೆ. ಸಿ ಎಂ ಅವರಿಗೂ ಪರಮೇಶಿ ಅವರ ಹತ್ಯೆಯ ಬಗ್ಗೆ ಮಾಹಿತಿ ಇದ್ರೂ ಸರಕಾರಿ ಭಾಗವಹಿಸಿದ್ದಾರೆ. ಕೋಟ್ಯಾಂತರ ರೂಪಾಯಿ ಹಿಂದೂ ಮಂದಿರಕ್ಕೆ ನಷ್ಟವಾಗಿದೆ. ಇನ್ನೂ ಹಿಂದೂ ಕಾರ್ಯಕರ್ತರ ಆಸ್ತಿ ಪಾಸ್ತಿಗಳು ನಾಶವಾಗಿದೆ. ಸಮಾರಂಭಕ್ಕೆ ಭಾಗವಹಿಸಲು ಬಂದಿರುವ ಸಿ ಎಂ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಮಾಹಿತಿ ಇದ್ರೂ ತುಟಿ ಪಿಟಿಕ್ ಎನ್ನಲಿಲ್ಲ. ಸಿ ಎಂ ಅವರ ಈ ನಡತೆಯೇ ಇಂದಲೇ ತಿಳಿಯುತ್ತೆ ಅವರು ಹಿಂದೂ ವಿರೋದಿ ಮುಖ್ಯ ಮಂತ್ರಿ ಅಂತಾ ಸಾಬೀತಾಗುತ್ತಿದೆ. ಹಿಂದೂ ವಿರೋದಿ ಸಿ ಎಂ ನೋಡುತ್ತಿರುವುದು ಕರ್ನಾಟಕದಲ್ಲಿ ಇದೇ ಮೊದಲ ಬಾರಿ.ಮುಂದಿನ ದಿನಗಳಲ್ಲಿ ಜನರೇ ಇದಕ್ಕೆ ಸರಿಯಾದ ಉತ್ತರ ನೀಡಲಿದ್ದಾರೆ ಎಂದ್ರು.
ಪ್ರಧಾನಿ ಮೋದಿ ಅವರ ವಿರುದ್ದ ಕಾಂಗ್ರೆಸ್ ನಾಯಕ ಬನಶಂಕರ್ ಅಯ್ಯರ್ ಹೇಳಿಕೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ಮಾನಸಿಕತೆ ಎನೂ ಎಂಬುವುದು ಬನ ಶಂಕರ್ ಅವರ ಹೇಳಿಕೆಯಿಂದ ಮನದಟ್ಟಾಗುತ್ತಿದೆ.ಹಿಂದುಳಿದ ವರ್ಗದ ಪ್ರದಾನಿ ಮೋದಿಯವರು ಕಳೆದ 3 ವರ್ಷಗಳಿಂದ ದೇವನ್ನು ಸಮರ್ಥವಾಗಿ ಮುನ್ನೆಡುಸುತ್ತಿದ್ದಾರೆ. ಕಳೆದ ೬೦ ವರ್ಷಗಳಲ್ಲಿ ವಂಶಪರಂಪರೆಯಾಗಿ ದೇಶವನ್ನು ಆಳ್ವಿಕೆ ನಡೆಸಿರುವ ಕಾಂಗ್ರೆಸ್ ಪಕ್ಷದ ನಯಕರು ಪ್ರಧಾನಿ ಮೋಧಿಯವರ ಸಮರ್ಥ ಆಡಳಿತವನ್ನು ಸಹಿಸದೇ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ.ಅಹಿಂದ ಪರವಾಗಿರುವ ಇರುವ ಸರಕಾರ ಎಂಬ ಆಶ್ವಾಸನೆಯನ್ನು ನೀಡಿ ನಂತರ ಅಹಿಂದವನ್ನೇ ತುಳಿಯುವ ಕೆಲಸ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದ ಆಡಳಿತ ಸರಕಾರದ ಬುದ್ದಿಯನ್ನು ಈಗ ಕೇಂದ್ರದ ಕಾಂಗ್ರೆಸ್ ಪಕ್ಷದ ನಾಯಕರು ಮುಂದುವರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಉಳ್ಳವರು ಹಾಗೂ ಇಲ್ಲದವರು ಎಂಬ ಮಾನಸಿಕತೆ ಇದೆ.ಜನರೇ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ.
ರಾಜ್ಯ ಸರಕಾರದ ಜನರ್ಶೀವಾದ ಯಾತ್ರೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರು ೪ ವರ್ಷಗಳ ಹಿಂದೆ ಜನರ ಆರ್ಶೀವಾದವನ್ನು ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಹೀಗಿರುವಾಗ ಅವರು ಜನಾಆರ್ಶೀವಾದ ಯಾತ್ರೆಯನ್ನು ಕೈಗೊಳ್ಳುವ ಅವಶ್ಯಕತೆಯಿಲ್ಲ. ಈ ಹಿಂದೆಯೂ ಇದೇ ರೀತಿಯ ಯಾತ್ರೆಯನ್ನು ಸಿ ಎಂ ಕೈಗೊಳ್ಳಲು ಮುಂದಾಗ ಕಾಂಗ್ರೆಸ್ ಪಕ್ಷ ರಾಜ್ಯದ್ಯಾಕ್ಷರು ವಿರೋಧವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ಯಾತ್ರೆಯನ್ನು ಕೈ ಬಿಟ್ಟಿದ್ದರು. ಸಿ ಎಂ ಸಿದ್ದರಾಮಯ್ಯ ಅವರು ಜಾರಿಗೆ ತಂದಿರುವ ಎಲ್ಲಾ ಭಾಗ್ಯಗಳು ರಾಜ್ಯದಲ್ಲಿ ಸೋಲು ಕಂಡಿದೆ.ಕಳೆದ 4 ವರ್ಷಗಳಿಂದ ಜನ ಶೀರ್ವಾದವನ್ನು ಪಡೆದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ರಾಜ್ಯದ ಅಭಿವೃದ್ದಿಯಲ್ಲಿ ಯಾವರೀತಿ ಕೊಡುಗೆ ನೀಡಿದ್ದೀರಿ ಎಂಬ ಅಂಕಿ ಅಂಶದ ಉತ್ತರ ರಾಜ್ಯದ ಜನತೆಯ ಮುಂದಿಡಬೇಕು ಎಂದು ಆಗ್ರಹಿಸಿದರು.