ಮಂಗಳೂರು, ಜೂ 27 (Daijiworld News/MSP): ನಗರದ ಕಂಕನಾಡಿ ಬಳಿ ಇರುವ ಚಿನ್ನಾಭರಣ ಮಳಿಗೆಗಳಾದ ಸುಲ್ತಾನ್ ಗೋಲ್ಡ್, ಹಾಗೂ ಸಿಟಿ ಗೋಲ್ಡ್ ಮೇಲೆ ಜೂ. 26 ರ ಬುಧವಾರ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಗುರುವಾರವೂ ಕಡತಗಳ ಪರಿಶೀಲನೆಯನ್ನು ಮುಂದುವರಿಸಿದ್ದಾರೆ.
ಸುಲ್ತಾನ್ ಗೋಲ್ಡ್ ಶಾಖೆಯೂ ರಾಜ್ಯದ ನಾಲ್ಕು ಕಡೆಗಳಲ್ಲಿದ್ದು, ಮಂಗಳೂರು, ಉಡುಪಿ ದಾವಣಗೆರೆ ಹಾಗೂ ಬೆಂಗಳೂರಿನಲ್ಲಿರುವ ಶಾಖೆಯ ಮೇಲೆ ಏಕಾಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ. ಕೇರಳದ ಉದ್ಯಮಿ ರವೂಫ್ ಸುಲ್ತಾನ್ ಗೋಲ್ಡ್ ನ ಮಾಲೀಕರಾಗಿದ್ದಾರೆ ಎಂದು ತಿಳಿದುಬಂದಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.