ಕುಂದಾಪುರ, ಆ. 25 (DaijiworldNews/TA): Kgf ಸಹಿತ ಅನೇಕ ಸಿನಿಮಾಗಳ ಪ್ರತಿಭಾನ್ವಿತ ನಟ, ಸುಪ್ರಸಿದ್ಧ ಕಲಾನಿರ್ದೇಶಕ ಹಾಗೂ ಹೃದಯವಂತರಾದ ದಿನೇಶ್ ಮಂಗಳೂರು ಇಂದು (ಭಾನುವಾರ) ಬೆಳಗಿನ ಜಾವ ಮೂರೂವರೆ ಗಂಟೆಗೆ ವಿಧಿವಶರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು.

ದಿನೇಶ್ ಮಂಗಳೂರು ಅವರು ಕಳೆದ ಐದು ದಿನಗಳಿಂದ ಬ್ರೇನ್ ಹ್ಯಾಮರೇಜ್ನಿಂದ ಕುಂದಾಪುರದ ಸರ್ಜನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಇಂದು ಅಸ್ತಮಿಸಿದ್ದಾರೆ.
ಅವರ ಅಕಾಲಿಕ ನಿಧನದಿಂದ ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ದುಃಖದ ಛಾಯೆ ಆವರಿಸಿದೆ. ಹಳೆಯ-ಹೊಸ ತಲೆಮಾರಿನ ಕಲಾವಿದರೊಂದಿಗೆ ಅವರು ಮಾಡಿದ ಕೆಲಸಗಳು ಸ್ಮರಣೀಯವಾಗಿವೆ. ವಿನಮ್ರ ವ್ಯಕ್ತಿತ್ವದ ಮೂಲಕ ಅವರು ಎಲ್ಲರ ಮನ ಗೆದ್ದಿದ್ದರು.