ಕುಂದಾಪುರ, ಜೂ 27 (Daijiworld News/MSP): ಕುಂದಾಪುರ ತಾಲೂಕಿನ ಗುಳ್ವಾಡಿ ಸೌಕೂರು ಕಂಬಳ ಗದ್ದೆ ಬಳಿ ಬರದ್ಕಲ್ ಗದ್ದೆಯಲ್ಲಿ ಅತೀ ಅಪರೂಪವಾದ ಶಾಸನ ಪತ್ತೆಯಾಗಿದೆ.
ಶಾಸನದಲ್ಲಿ ಆನೆ ಶಿವ ಲಿಂಗದ ಮೇಲೆ ಪುಷ್ಪವನ್ನು ಸಮರ್ಪಿಸುವ ಸನ್ನಿವೇಶ ಇದೆ. ಶಾಸನದಲ್ಲಿ ಶಿವಲಿಂಗ, ಸೂರ್ಯ, ಚಂದ್ರ, ಅಕ್ಷರವು ಅಸ್ಪಷ್ಟವಾಗಿದೆ ಹಾಗೂ ಈ ಶಾಸನವು ಕೆಸರು ತುಂಬಿರುವ ಗದ್ದೆಯಲ್ಲಿ ಇರುವುದರಿಂದ ಸಂರಕ್ಷಿಸುವ ಕಾರ್ಯವಾಗಬೇಕಿದೆ. ಇದಲ್ಲದೆ ಹತ್ತಿರ ಇರುವ ಅಪ್ಪಣ್ಣ ಶೆಟ್ಟಿ ಮನೆಯ ಬಳಿ ಇರುವ ಬರದ್ಕಲ್ ಗದ್ದೆಯಲ್ಲಿ ಇನ್ನೊಂದು ಶಾಸನ ಕಾಣಸಿಕ್ಕಿವೆ .ಸಂಪೂರ್ಣ ಮಾಹಿತಿ ಅಧ್ಯಯನ ಬಳಿಕವಷ್ಟೆ ಲಭ್ಯವಾಗಲಿದೆ.
ಈ ಶಾಸನವನ್ನು ಪ್ರದೀಪ ಕುಮಾರ್ ಬಸ್ರೂರು ಎಂಬವರು ಪತ್ತೆ ಹೆಚ್ಚಿದ್ದು ಇವರಿಗೆ ಶಂಕರನಾರಾಯಣ ಪ್ರವೀಣ, ಅಪ್ಪಣ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ ಗುಳ್ವಾಡಿ ಸಹಕರಿಸಿರುತ್ತಾರೆ.