ಬಂಟ್ವಾಳ, ಆ. 25 (DaijiworldNews/AA): ಮಾಜಿ ಸಚಿವ ಬಿ.ರಮಾನಾಥ ರೈ ಅವರ ಗೌರವಾಧ್ಯಕ್ಷತೆಯಲ್ಲಿ ಬಲ್ಲೋಡಿಗುತ್ತು ಪದ್ಮಶೇಖರ ಜೈನ್ ಅವರ ಅಧ್ಯಕ್ಷತೆಯಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಬಂಟ್ವಾಳದ ಜಕ್ರಿಬೆಟ್ಟು ಬೈಪಾಸ್ ನಲ್ಲಿ ಆಗಸ್ಟ್ 27ರಿಂದ 31ರವರೆಗೆ ಹಲವು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಬಂಟ್ವಾಳದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮಗಳ ವಿವರ ನೀಡಿದ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಅವರು, "ಕಳೆದ 21 ವರ್ಷಗಳ ಹಿಂದೆ ಜಕ್ರಿಬೆಟ್ಟಿನಲ್ಲಿ ಆರಂಭಗೊಂಡ ಗಣೇಶೋತ್ಸವ ಇಡೀ ನಾಡಿಗೆ ಮಾದರಿಯಾಗಿ ಸಂಪನ್ನಗೊಂಡಿದ್ದು, ಒಂದು ಜಾತಿ, ಮತ, ಧರ್ಮಕ್ಕೆ ಸೀಮಿತವಾಗಿರದೆ, ಎಲ್ಲರು ಒಂದಾಗಿ ಬೆಸೆಯುವ ಬೆರೆಯುವ ಸೌಹಾರ್ದತೆಯ ಸಮ್ಮೇಳನವಾಗಿ ರೂಪುಗೊಂಡು ಬಂಟ್ವಾಳದ ಹಬ್ಬವಾಗಿ ಆಚರಿಸಲ್ಪಡುತ್ತಿದೆ. ಭಾವೈಕ್ಯತೆಗೆ ಪೂರಕವಾಗಿ ಚೌತಿಯನ್ನು ಕಳೆದ 21 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಸಮಾಜದ ಎಲ್ಲರನ್ನೂ ಒಗ್ಗೂಡಿಸಿ ಆಚರಣೆ ನಡೆಯುತ್ತಿದ್ದು, ಸರಕಾರದ ನಿಯಮಾವಳಿಗೆ ಪೂರಕವಾಗಿ ನಡೆಸಲಾಗುತ್ತಿದೆ. ಸಾಮರಸ್ಯದ ಬಂಟ್ವಾಳ ಸ್ಥಾಪನೆಗೆ ನಾಡಹಬ್ಬವಾಗಿ ರೂಪುಗೊಳ್ಳಬೇಕು ಎಂಬ ಆಶಯ ನಮ್ಮದು" ಎಂದರು.
ಈ ಸಂದರ್ಭ ಅಧ್ಯಕ್ಷ ಬಿ.ಪದ್ಮಶೇಖರ ಜೈನ್ ಬಲ್ಲೋಡಿಗುತ್ತು, ಉಪಾಧ್ಯಕ್ಷರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲುಗುತ್ತು, ಮೋಹನ್ ಚಂಡ್ತಿಮಾರ್, ಪ್ರಧಾನ ಕಾರ್ಯದರ್ಶಿ ಎಂ.ರಾಜೀವ ಶೆಟ್ಟಿ ಎಡ್ತೂರು, ಕಾರ್ಯದರ್ಶಿಗಳಾದ ಎನ್.ಮಹಾಬಲ ಬಂಗೇರ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಪಿ.ಪ್ರವೀಣ್ ಕಿಣಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಾಲಕೃಷ್ಣ ಆರ್. ಅಂಚನ್, ಚಂದ್ರಶೇಖರ ಭಂಡಾರಿ, ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಪ್ರಮುಖರಾದ ಅಶೋಕ್ ಭಂಡಾರಿಬೆಟ್ಟು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ವೆಂಕಪ್ಪ ಪೂಜಾರಿ ಸಹಿತ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.