ಬಂಟ್ವಾಳ, ಆ. 25 (DaijiworldNews/AA): ಬಂಟ್ವಾಳದ ಪ್ರಸಿದ್ಧ ಸೋಮಯಾಜಿ ಆಸ್ಪತ್ರೆಯಲ್ಲಿ ಇದೀಗ ವೈದ್ಯಕೀಯ ತಂತ್ರಜ್ಞಾನದಲ್ಲಿ ಮತ್ತೊಂದು ಹೆಜ್ಜೆ ಮುಂದಾಗಿದೆ. ಅತ್ಯಾಧುನಿಕ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗಾಗಿ ನೂತನ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.












ಬಂಟ್ವಾಳದ ಪ್ರಸಿದ್ಧ ಸೋಮಯಾಜಿ ಆಸ್ಪತ್ರೆಯು ತಮ್ಮ ಪ್ರದೇಶದ ಜನ್ರ ಸೇವೆಗಾಗಿ ಇದೀಗಾ ವೈದ್ಯಕೀಯ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನದತ್ತ ಒಂದು ಹೆಜ್ಜೆಯನ್ನಿಟ್ಟಿದ್ದು ಒಲಂಫಸ್ ಸಂಸ್ಥೆಯ 'ವಿಸೆರಾ ಎಸ್ - ಒಟಿವಿ ಎಸ್ 500' ಎಂಬ ಅತ್ಯಾಧುನಿಕ ಲ್ಯಾಪರೊಸ್ಕೋಪಿಕ್ ಮತ್ತು ಇಮೇಜಿಂಗ್ ತಂತ್ರಜ್ಞನವನ್ನು ಬಳಸಿ ಹಲವಾರು ಶಸ್ತ್ರಚಿಕಿತ್ಸೆಗಳನ್ನು ಈಗ ನಿರ್ವಹಿಸಬಹುದಾದ ವ್ಯವಸ್ಥೆಯನ್ನು ಕಲ್ಪಿಸಿದೆ.
"ಈ ನೂತನ ತಂತ್ರಜ್ಞಾನದ ಮೂಲಕ ಕಿವಿ, ಗಂಟಲು, ಸ್ತ್ರೀರೋಗ, ಯುರೋಲಾಜಿಕಲ್, ಅಪೆಂಡಿಕ್ಸ್, ಕೊಲೆಬ್ಲಾಡರ್, ಹರ್ನಿಯಾ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗಳನ್ನು ಅತ್ಯಂತ ನಿಖರತೆಯಿಂದ ನಡೆಸಬಹುದಾಗಿದೆ" ಎಂದು ಜನ್ರಲ್ ಆ್ಯಂಡ್ ಲ್ಯಾಪರೊಸ್ಕೋಪಿಕ್ ಸರ್ಜನ್ ಡಾ. ಕೆ. ಆರ್ ಭಗ್ವಾನ್ ಮಾಹಿತಿ ನೀಡಿದರು.
"ಈ ನವೀನ ಚಿಕಿತ್ಸಾ ವಿಧಾನದಿಂದ ಕನಿಷ್ಠ ಗಾಯದ ಗುರುತು, ಕಡಿಮೆ ನೋವು, ತ್ವರಿತ ಚೇತರಿಕೆ, ಕಡಿಮೆ ರಕ್ತದ ನಷ್ಟ, ಕಡಿಮೆ ಸೋಂಕು, ಮತ್ತು ಕಡಿಮೆ ಆಸ್ಪತ್ರೆ ವಾಸದಂತಹ ಪ್ರಯೋಜನೆಗಳೋಂದಿಗೆ ಸೇವೆ ನೀಡಲಿದೆ" ಎಂದು ಒಲಂಫಸ್ ಸಂಸ್ಥೆಯ ಕರ್ನಾಟಕ ವಿಭಾಗದ ಸೇಲ್ಸ್ ಮ್ಯಾನೇಜರ್ ಸುನೀಲ್ ಶಿವಕುಮಾರ್ ತಿಳಿಸಿದರು.
ಈ ವಿಶೇಷ ಸಂದರ್ಭದಲ್ಲೇ ಸೋಮಯಾಜಿ ಆಸ್ಪತ್ರೆಯ ಮುಖ್ಯಸ್ಥ ಡಾ. ರಮೇಶ್ ಆನಂದ ಸೋಮಯಾಜಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ನೂತನ ತಂತ್ರಜ್ಞಾನದ ಚಾಲನೆಗೆ ಅತಿಥಿಗಳು ಕೇಕ್ ಕತ್ತರಿಸಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಶಶಿಕಲಾ ಸೋಮಯಾಜಿ, ಡಾ. ಅನಂತ್ ಸೋಮಯಾಜಿ, ಸರ್ವಿರ್ ಸರ್ಜಿಕಲ್ ರೆಮೆಡಿ ಪ್ರೈವೆಟ್ ಲಿಮಿಟೆಡ್ ನಿರ್ದೇಶಕ ತ್ರಿವಿಕ್ರಂ ಭಟ್, ಜನರಲ್ ಮ್ಯಾನೇಜರ್ ಪ್ರಸಾದ್ ಪುತ್ತಿಗೆ, ಸೀನಿಯರ್ ಸೇಲ್ಸ್ ಇಂಜಿನಿಯರ್ ಸೂರಜ್ ಶರ್ಮಾ, ಸೇಲ್ಸ್ ಇಂಜಿನಿಯರ್ ರೋಹನ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.