ಸುಳ್ಯ, ಸೆ. 03 (DaijiworldNews/AK): ಸೆ.2ರಂದು ರಾತ್ರಿ ಪೆರಾಜೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಲ್ಚರ್ಪೆ ಸಿರಿಕುರಲ್ ನಗರದ ಸಮೀಪದ ತೋಟಕ್ಕೆ ನುಗ್ಗಿ ಕಾಡಾನೆಗಳು ದಾಂದಲೆ ನಡೆಸಿದ ಘಟನೆ ವರದಿಯಾಗಿದೆ.

ಸಮೀಪದ ರೈತರ ತೋಟಗಳಿಗೆ ನುಗ್ಗಿದ ಆನೆಗಳ ಹಿಂಡು ತೆಂಗು,ಬಾಳೆ,ಅಡಿಕೆ ಇತರ ಅಪಾರ ಬೆಳೆಗಳನ್ನು ತಿಂದು ಹಾಕಿದೆ. ಇದರಿಂದ ಈ ಭಾಗದ ಅನೇಕ ರೈತರು ನಷ್ಡಕೊಳಗಾಗಿದ್ದಾರೆ.