ಮಂಗಳೂರು, ಸೆ. 05 (DaijiworldNews/AK): ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡದ್ದ ಆರೋಪಿ 26 ವರ್ಷದ ಕಾವೂರು ಕೆಎಚ್ಬಿ ಕಾಲೋನಿಯ ದೇವಿ ನಗರ ನಿವಾಸಿ ವಿಶಾಲ್ ಕುಮಾರ್(26) ಎಂಬಾತನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಸೆ.4 ರಂದು ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ಆರೋಪಿಯನ್ನು ಬ್ಯೂರೋ ಆಫ್ ಇಮಿಗ್ರೇಷನ್ರವರು ವಶಕ್ಕೆ ಪಡೆದು ಕಾವೂರು ರಾಣೆಗೆ ಒಪ್ಪಿಸಿದ್ದರು.
2016ರಲ್ಲಿ ಕಾವೂರು ರಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಈತ ಮೂರನೇ ಆರೋಪಿಯಾಗಿದ್ದು, 2022ರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ . ಈತನ ವಿರುದ್ಧ ನ್ಯಾಯಾಲಯ ದಸ್ತಗಿರಿ ವಾರೆಂಟ್ ಹೊರಡಿಸಿತ್ತು. ಇವನು ದುಬೈಗೆ ಹೋಗಿರುವ ಖಚಿತ ಮಾಹಿತಿ ಮೇರೆಗೆ ಎಲ್ಒಸಿ ಹೊರಡಿಸಲಾಗಿತ್ತು.
೩ ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದುದರಿಮದ ಈತನ ಮೇಲೆ ಕಾವೂರು ಪೊಲೀಸರು ಪ್ರಕರಣ ದಾಳಲಿಸಿಕೊಂಡಿದ್ದಾರೆ. ಮಾನ್ಯ ೩ನೇ ಹೆಚ್ಚುವರಿ ಜಿಲ್ಲಾ ಮತ್ತು ನ್ಯಾಯಾಲಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ಸೆ. ೧೮ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈತನ ಮೇಲೆ ಬರ್ಕೆ ಪೊಲೀಸ್ ರಾಣೆಯಲ್ಲಿಯೂ ಕೂಡ ಪ್ರಕರಣ ದಾಖಲಾಗಿದೆ.