ಮಾಣಿ, ಸೆ. 05 (DaijiworldNews/AK): ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ 1500 ನೇ ಜನ್ಮದಿನ ಮೀಲಾದುನ್ನಬಿ ಕಾರ್ಯಕ್ರಮವನ್ನು ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಬೆಳಗ್ಗಿನ ಜಾವ 4 ಗಂಟೆಗೆ ಪ್ರಭಾತ ಮೌಲಿದ್ ನೊಂದಿಗೆ ಆರಂಭಗೊಂಡ ಕಾರ್ಯಕ್ರಮ 8 ಗಂಟೆಗೆ ಧ್ವಜಾರೋಹಣ ಮೂಲಕ ಮೀಲಾದ್ ಜಾಥಾಗೆ ಚಾಲನೆ ನೀಡಲಾಯಿತು, ಸೂರಿಕುಮೇರು ಹಳೀರ ಮಾಣಿ ಜಂಕ್ಷನ್, ದಾಸಕೋಡಿ ಕಾಯರಡ್ಕ ಮೂಲಕ ಬಂದು ಸೂರಿಕುಮೇರು ಮಸೀದಿಯಲ್ಲಿ ಸಮಾಪ್ತಿಗೊಂಡಿತು, ಮಾಣಿ ಜಂಕ್ಷನ್ ಬಳಿ ಹಿಂದೂ ಮುಖಂಡರು ಐಸ್ಕ್ರೀಂ ನೀಡುವ ಮೂಲಕ ಮೀಲಾದ್ ಜಾಥಾವನ್ನು ಸ್ವಾಗತಿಸಿದರು. ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ ಮಾಣಿ,ಬಾಲಕೃಷ್ಣ ಆಳ್ವ ಕೊಡಾಜೆ,ವಿಕೇಶ್ ಶೆಟ್ಟಿ ಮಾಣಿ,ಪ್ರವೀಣ್ ಮುಂತಾದವರು ನೇತೃತ್ವ ವಹಿಸಿ ಶುಭಹಾರೈಸಿದರು.
ಸಮಾಜದಲ್ಲಿ ನಂಬಿಕೆ ವಿಶ್ವಾಸ ಸೌಹಾರ್ದತೆ ಹೆಚ್ಚಿಸುವ ಈ ಕಾರ್ಯವು ಬಹಳ ಶ್ಲಾಘನೆಗೆ ಪಾತ್ರವಾಯಿತು, ಮೀಲಾದ್ ರ್ಯಾಲಿಯಲ್ಲಿ ಪುಟಾಣಿ ಮಕ್ಕಳ ದಫ್ ಪ್ರದರ್ಶನ ,ಫ್ಲವರ್ ಶೋ ಆಕರ್ಷಕ ವಸ್ತ್ರಗಳು ಬಹಳ ಗಮನ ಸೆಳೆಯಿತು, ದಾರಿಯುದ್ದಕ್ಕೂ ಸಿಹಿತಿಂಡಿ ,ತಂಪು ಪಾನೀಯ, ಐಸ್ಕ್ರೀಂ ನೀಡುವ ಮೂಲಕ ಆಯಾ ಊರಿನ ಮನೆಯವರು ಮತ್ತು ಸಂಘಟನೆಗಳು ಸ್ವಾಗತಿಸಿ ಸಂಭ್ರಮಿಸಿದರು.
ಸೂರಿಕುಮೇರು ಜಮಾಅತಿನ ಯುವಕರ ತಂಡ ಮಸೀದಿ ಮತ್ತು ದಾರಿಯುದ್ದಕ್ಕೂ ತಳಿರು ತೋರಣ ಬಣ್ಣದ ಬೆಳಕಿನ ಮೂಲಕ ಶೃಂಗರಿಸಿ ಪ್ರವಾದಿ(ಸ.ಅ) ಜನ್ಮದಿನವನ್ನು ಆಕರ್ಷಣೀಯವಾಗಿಸಿದರು,ಮಸೀದಿಯ ಖತೀಬ್ ಹಸೈನಾರ್ ಸಅದಿ ಪೆರ್ಲ,ಸದರ್ ನಾಸೀರ್ ಸಅದಿ ನೇರಳಕಟ್ಟೆ, ಅಧ್ಯಾಪಕ ಮುಹಮ್ಮದ್ ಹನೀಫ್ ಸಅದಿ ಸೆರ್ಕಳ,ಅಧ್ಯಕ್ಷ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಅಮೀರುದ್ದೀನ್,ಕೋಶಾಧಿಕಾರಿ ಯೂಸುಫ್ ಹಾಜಿ ಸೂರಿಕುಮೇರು,ಸಹಿತ ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯ ಆಡಳಿತ ಸಮಿತಿಯ ಪದಾಧಿಕಾರಿಗಳು, ಮೀಲಾದ್ ಸಮಿತಿಯ ಪದಾಧಿಕಾರಿಗಳು,ಮಿಫ್ತಾಉಲ್ ಉಲೂಂ ಮದ್ರಸಾ ವಿದ್ಯಾರ್ಥಿಗಳು, ಬದ್ರಿಯಾ ಫ್ರೆಂಡ್ಸ್, ಸೂರಿಕುಮೇರು, ಅಲ್ ಅಮೀನ್ ಅಸೋಸಿಯೇಶನ್ ಮಾಣಿ ಮತ್ತು ಜಮಾಅತಿನ ಎಲ್ಲರೂ ಮೀಲಾದ್ ಜಾಥಾದಲ್ಲಿ ಭಾಗವಹಿಸಿ ಕಾರ್ಯನಿರ್ವಹಿಸಿದರು.
ಕೊನೆಯಲ್ಲಿ ಸೂರಿಕುಮೇರು ಯುವಕರಿಂದ ಮಸೀದಿ ವಠಾರದಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು, ಜುಮಾ ನಮಾಝ್ಗೆ ಮೊದಲು ಮೌಲಿದ್ ಪಾರಾಯಣ ನಡೆಸಿ ಜುಮಾ ಬಳಿಕ ಪ್ರವಾದಿ ( ಸ.ಅ) ರವರ ಹೆಸರಿನಲ್ಲಿ ಸೀರಣಿ ವಿತರಿಸಲಾಯಿತು,
ಕೆಲವೆಡೆ ಹಿಂದೂ, ಮುಸ್ಲಿಂ, ಕ್ರೈಸ್ತರ ಮಧ್ಯೆ ಬಾಂಧವ್ಯ ಬೆಸೆಯುವ ಸೌಹಾರ್ದ ಕಾರ್ಯಕ್ರಮಗಳೂ ನಡೆದವು. ಕೆಲವೆಡೆಗಳಲ್ಲಿ ಮದರಸಾ ವಿದ್ಯಾರ್ಥಿಗಳಿಂದ ಮೆರವಣಿಗೆ ,ಆಕರ್ಷಕ ದಪ್ ಗಮನ ಸೆಳೆಯಿತು. ಮಿಲಾದುನ್ನಬಿ ಇಂದು ಆಚರಿಸುತ್ತಿದ್ದರೂ ,ಕೆಲವು ಮಸೀದಿ ವ್ಯಾಪ್ತಿಗಳಲ್ಲಿ ಕಾರ್ಯಕ್ರಮ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಶನಿವಾರ ಮತ್ತು ಭಾನುವಾರಗಳಂದೂ ನಡೆಯಲಿದೆ.
ಮಿಲಾದುನ್ನಬಿ ಪ್ರಯುಕ್ತ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಸಾಂತ್ವನ -ಹಣ್ಣು ಹಂಪಲು ವಿತರಣೆ, ವೀಲ್ ಚಯರ್ ಮತ್ತು ಇನ್ನಿತರ ಪರಿಕರಗಳನ್ನು ವಿತರಿಸಲಾಯಿತು. ಈದ್ ಮೆರವಣಿಗೆಗೆ ಹಿಂದೂ ಬಾಂಧವರಿಂದ ಸಿಹಿ ತಿಂಡಿ ವಿತರಣೆ : ಸೌಹಾರ್ದ ಸಂದೇಶ
ಬೈಂದೂರು ತಾಲೂಕು ಶಿರೂರು ಭಾಗದ ಅಲ್ಪಸಂಖ್ಯಾತ ಬಾಂಧವರ ಈದ್ ಮಿಲಾದ್ ಮೆರವಣಿಗೆ ಸಂದರ್ಭ ಹಿಂದೂ ಸಮಾಜ ಬಾಂಧವರು ಸಿಹಿ ತಿಂಡಿ ಹಂಚುವ ಮೂಲಕ ಸೌಹಾರ್ದತೆ ಮೆರೆದರು. ಸ್ಥಳೀಯ ಮುಖಂಡ ವೀರಭದ್ರ ಗಾಣಿಗ ಮತ್ತು ದಲಿತ ಸಮಾಜದ ಮುಖಂಡರ ನೇತೃತ್ವದಲ್ಲಿ ಸಿಹಿ ತಿಂಡಿ ಹಂಚುವುದರ ಮೂಲಕ ಶಾಂತಿ ಸೌಹಾರ್ದತೆ ಸಾರಲಾಯಿತು.