ಕೊಚ್ಚಿ, ಡಿ 9: ಓಖಿ ಚಂಡಮಾರುತದ ಬಳಿಕ ರಕ್ಷಣೆಯಲ್ಲಿ ತೊಡಗಿದ್ದ ಭಾರತೀಯ ನೌಕಪಡೆ ಲಕ್ಷದ್ವೀಪ ಕರಾವಳಿಯಲ್ಲಿ 180 ಮೀನುಗಾರರು ಮತ್ತು 17 ಬೋಟ್ ಗಳನ್ನು ಪತ್ತೆಹಚ್ಚಿದೆ.
ಲಕ್ಷದ್ವೀಪದ ಕರಾವಳಿಗೆ ಶೋಧ ಕಾರ್ಯಾಚರಣೆಗೆಂದು ಐ ಎನ್ ಎಸ್ ಕಲ್ಫೇನಿ ಹಡಗುಗಳನ್ನು ಕಳುಹಿಸಲಾಗಿತ್ತು. ಸಮುದ್ರ ಮತ್ತೇ ಶಾಂತ ಸ್ಥಿತಿಯತ್ತ ಮರಳುತ್ತಿದ್ದಂತೆ ಇದೀಗ ಲಕ್ಷದ್ವೀಪದ ಸಮೀಪ 17 ದೋಣಿಗಳನ್ನು ಮತ್ತು 180 ಮೀನುಗಾರರನ್ನು ಪತ್ತೆ ಮಾಡಿದೆ.
ಕನ್ಯಾಕುಮಾರಿ ಜಿಲ್ಲೆಯಲ್ಲಿ 66 ದೋಣಿಗಳು ಮತ್ತು 713 ಮೀನುಗಾರರ ರಕ್ಷಣೆ ಆಗಬೇಕಿದೆ ಎಂದು ತಿಳಿದುಬಂದಿದೆ.