ಕಾಸರಗೋಡು, ಸೆ. 13 (DaijiworldNews/AK):ರಾಷ್ಟ್ರೀಯ ಹೆದ್ದಾರಿಯ ಉಪ್ಪಳ ಕೈಕಂಬ ಬಳಿ ನಡೆದ ವಾಹನ ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡ ಘಟನೆ ಶನಿವಾರ ಮುಂಜಾನೆ ನಡೆದಿದೆ.

ಟೆಂಪೋ ಚಾಲಕ ತಮಿಳುನಾಡು ನಾಗರ ಕೋವಿಲ್ ನ ಮುಹಮ್ಮ ದ್ ರಿಯಾಝ್ ( 35) ಕ್ಲೀನರ್ ಅಲಪ್ಪುಯದ ಎ. ರಾಜ (72)!ಹಾಗೂ ಇನ್ನೋರ್ವ ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಸರಗೋಡು ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಮೀನು ಸಾಗಾಟ ಟೆಂಪೋ ದ ಟಯರ್ ಪಂಕ್ಚರ್ ಆಗಿದ್ದು, ಇದರಿಂದ ಟೆಂಪೋ ವನ್ನು ರಸ್ತೆ ಬದಿ ನಿಲ್ಲಿಸಿ ಚಾಲಕ ಇಳಿದು ಹಿಂದಿನಿಂದ ಬರುತ್ತಿದ್ದ ಇನ್ನೊಂದು ಮೀನಿನ ಟೆಂಪೊ ಗೆ ನಿಲ್ಲಿಸುವಂತೆ ಸೂಚಿಸಿದ್ದು, ಈ ಎರಡು ಟೆಂಪೋ ದವರು ಮಾತನಾಡುತ್ತಿದ್ದಂತೆ ಹಿಂದಿನಿಂದ ಬಂದ ಇನ್ನೊಂದು ವಾಹನ ಮೂವರಿಗೆ ಡಿಕ್ಕಿ ಹೊಡೆದಿದೆ.
ರಸ್ತೆಗೆಸೆಯಲ್ಪಟ್ಟ ಮೂವರನ್ನು ಉಪ್ಪಳದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತು.