ಸುಳ್ಯ, ಸೆ. 14 (DaijiworldNews/TA): ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಶನಿವಾರ ಕೊನೆಯ ದಿನವಾದ ಸೆ. 13 ರಂದು ಬಲಿವಾಡು ಕೂಟ, ವಿಶೇಷ ಪೂಜೆ, ಭಜನಾ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆಯಿಂದ ಮಧ್ಯಾಹ್ನ ಮಹಾಪೂಜೆ ತನಕ ಶ್ರೀ ಕ್ಷೇತ್ರದಲ್ಲಿ ಭಜನಾ ಸತ್ಸಂಗ ಕಾರ್ಯಕ್ರಮ ನಡೆಯಿತು. ಶ್ರೀ ಚನ್ನಕೇಶವ ಭಜನಾ ಸಂಘ, ಶ್ರೀ ಶಿವಶಂಕರಿ ಮಹಿಳಾ ಭಜನಾ ಮಂಡಳಿ ತೊಡಿಕಾನ, ಶ್ರೀ ಪಂಚಾಕ್ಷರಿ ಮಹಿಳಾ ಭಜನಾ ಮಂಡಳಿ ಸಂಪಾಜೆ ಭಜನಾ ಸೇವೆ ನಡೆಸಿಕೊಟ್ಟರು.
ಮಹಾಪೂಜೆಯ ಬಳಿಕ ಅನ್ನಸಂತರ್ಪನೆ ನಡೆಯಿತು. ತಹಶೀಲ್ದಾರ್ ಮಂಜುಳಾ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು.ಕೆ ಸದಸ್ಯರಾದ, ತಿಮ್ಮಯ್ಯ ಮೆತ್ತಡ್ಕ, ಕೆ. ಕೆ. ಬಾಲಕೃಷ್ಣ, ವಸಂತ ಪೆಲ್ತಡ್ಕ, ಮಾಲತಿ ಭೋಜಪ್ಪ, ಚಂಚಲಾಕ್ಷಿ ಅರಂತೋಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.