ಬಂಟ್ವಾಳ, ಸೆ. 14 (DaijiworldNews/AA): ಬಂಟ್ವಾಳ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ ನಲ್ಲಿ, ಬಾಕಿ ಇದ್ದ 6228 ದಾವಾ ಪ್ರಕರಣಗಳಲ್ಲಿ 785 ಪ್ರಕರಣಗಳು ಇತ್ಯರ್ಥಗೊಂಡು ರೂ. 32,68,475 ರೂ. ಸಂದಾಯಗೊಂಡು ಇತ್ಯರ್ಥಗೊಂಡಿರುತ್ತದೆ. ಹಾಗೆಯೇ ಒಟ್ಟು 9898 ಪಿಎಲ್ಸಿ ಪ್ರಕರಣಗಳು (ದಾವಾ ಪೂರ್ಣ ಪ್ರಕರಣಗಳು) ಇತ್ಯರ್ಥಗೊಂಡಿದ್ದು, 3,02,54,522 ರೂ. ಸಂದಾಯವಾಗಿದೆ.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನಿಲ್ ಪ್ರಕಾಶ್ ಎಂ ಪಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೃಷ್ಣಮೂರ್ತಿ ಎನ್. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ರಾಜೇಂದ್ರ ಪ್ರಸಾದ್ ಕೆ. ಎಸ್ ಹಾಗೂ ಅನುರಾಧ ಎ ವಿ, ಪೂಜಾಶ್ರೀ ಮತ್ತು ಕಾರ್ತಿಕ್ ನ್ಯಾಯಿಕ ಸಂಧಾನಕಾರರಾಗಿದ್ದರು.
ಲೋಕ ಅದಾಲತ್ ಗೆ ವಕೀಲರ ಸಂಘ (ರಿ.) ಬಂಟ್ವಾಳ, ಕಂದಾಯ ಇಲಾಖೆ, ಪುರಸಭೆ, ಪೊಲೀಸ್ ಇಲಾಖೆಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸಹಕಾರಿ ಸಂಸ್ಥೆಗಳು ಸಹಕರಿಸಿದವು.