ಮಂಗಳೂರು, ಜೂ29(Daijiworld News/SS): ದಲಿತರ ಉದ್ಧಾರಕ್ಕಾಗಿ ತನು, ಮನ, ಧನವನ್ನು ಅರ್ಪಿಸಿ, ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಸಾಮಾಜಿಕ ಕ್ರಾಂತಿ ಮಾಡಿದ ಮಹಾನ್ ಚೇತನ ಕುದ್ಮುಲ್ ರಂಗರಾವ್ ಅವರ ಚಿಂತನೆಗಳನ್ನು ನಾವು ಅನುಸರಿಸುವ ಮೂಲಕ ಸಮಾಜದ ಸರ್ವಾಂಗಿಣ ಅಭಿವೃದ್ಧಿಗೆ ಶ್ರಮಿಸೋಣ ಎಂದು ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದರು.
ಮಂಗಳೂರಿನ ಅತ್ತಾವರ ಬಾಬುಗುಡ್ಡೆಯಲ್ಲಿರುವ ಕುದ್ಮುಲ್ ರಂಗರಾವ್ ಅವರ ಸಮಾಧಿಗೆ ನಮನ ಸಲ್ಲಿಸಿ ಶಾಸಕರು ಮಾತನಾಡಿದರು. ಶಾಸಕನಾಗಿ ಆಯ್ಕೆಯಾಗುವ ಮುನ್ನ ನಾಮಪತ್ರ ಸಲ್ಲಿಸುವಾಗ ಮೊದಲು ಕುದ್ಮುಲ್ ರಂಗರಾವ್ ಅವರ ಸಮಾಧಿಗೆ ನಮನ ಸಲ್ಲಿಸಿ ಆರ್ಶೀವಾದ ಪಡೆದದ್ದನ್ನು ಸ್ಮರಿಸಿದ ಶಾಸಕ ಕಾಮತ್ ಅವರು, ಪ್ರಸ್ತುತ ಕುದ್ಮುಲ್ ರಂಗರಾವ್ ಅವರ ಚಿಂತನೆಯೇ ನಮ್ಮ ಸಮಾಜದ ಅಭಿವೃದ್ಧಿಗೆ ಮುನ್ನುಡಿಯಾಗಿದೆ ಎಂದು ತಿಳಿಸಿದರು.
ಸಮಾಜದಲ್ಲಿ ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಸಾಮಾಜಿಕ ಕ್ರಾಂತಿ ಮಾಡಿದ ಮಹಾನ್ ಚೇತನ ಕುದ್ಮುಲ್ ರಂಗರಾವ್ ಅವರ ಚಿಂತನೆಗಳನ್ನು ನಾವು ಅನುಸರಿಸುವ ಮೂಲಕ ಸಮಾಜದ ಸರ್ವಾಂಗಿಣ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ನುಡಿದರು.
ಈ ವೇಳೆ ಕುದ್ಮುಲ್ ರಂಗರಾವ್ ಮೆಮೊರಿಯಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಹೃದಯನಾಥ,ಬಿಜೆಪಿ ಮುಖಂಡ ವಸಂತ್ ಜೆ ಪೂಜಾರಿ,ಪ್ರಮುಖರಾದ ಕೇಶವ ಧರಣಿ, ರಘುರಾಜ್ ಕದ್ರಿ, ದೇವೇಂದ್ರ ಕಾಪಿಕಾಡ್, ಶ್ಯಾಮ ಕರ್ಕೇರಾ, ತುಳಸಿದಾಸ ಕಾಪಿಕಾಡ್, ಕಿರಣ್ ಕುಮಾರ್ ಕೊಡಿಯಾಲ್ ಬೈಲ್, ಶಶಿಕಾಂತ್ ಬಿಎಸ್, ಶ್ರೀಧರ್ ಬಿ, ರವೀಂದ್ರನಾಥ್, ಲಲ್ಲೇಶ್ ಕುಮಾರ್, ದೇವದಾಸ್ ಶೆಟ್ಟಿ, ಜನಾರ್ಧನ ಕಾಪಿಕಾಡ್, ಉಮೇಶ್ ಕುಮಾರ್ ಕಾಪಿಕಾಡ್, ರವೀಂದ್ರ ಸೂಟರ್ ಪೇಟೆ, ರಘುವೀರ್ ಬಾಬುಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.