ಬಂಟ್ವಾಳ, ಡಿ 9: ಜಾತ್ಯಾತೀತ ಅಧಾರದಲ್ಲಿ ವೃತ್ತಿಪರ ಯೋಚನೆಯಲ್ಲಿ ಸರಕಾರಿ ನೌಕರರು ಆಡಳಿತ ಯಂತ್ರವನ್ನು ಚುರುಕುಗೊಳಿಸಿದಾಗ ಅಭಿವೃದ್ದಿ ಕೆಲಸಗಳು ನಡೆಯಲು ಸಾಧ್ಯ ಎಂದು ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನೂತನ ಸಭಾ ಭವನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. 6 ನೇ ವೇತನ ಆಯೋಗದ ವಿಚಾರವಾಗಿ ಈಗಾಗಲೇ ಸರಕಾರ ವೇತನ ಆಯೋಗದ ರಚನೆ ಮಾಡಿದೆ. ಇದು ಸಿಗಲು ಪೂರಕವಾದ ನಡವಳಿಕೆಯ ಒಂದು ಭಾಗ ಎಂದು ತಿಳಿದುಕೊಂಡಿದ್ದೀರಿ ಎಂದು ಭಾವಿಸಿದ್ದೇನೆ. ಶ್ರೀಘ್ರವಾಗಿ ಸರಕಾರಿ ನೌಕರರು ಫಲಾನುಭವಿಗಳಾಗುತ್ತೀರಿ. ಸರಕಾರಿ ಕೆಲಸ ಯಾವುದೇ ಶಿಫಾರಸನ ಮೇಲೆ ಯಾರಿಗೂ ಸಿಗುತ್ತವೆ ಎನ್ನುವ ತಪ್ಪು ಭಾವನೆ ಬೇಡ ಎಂದು ಸ್ಪಷ್ಟಪಡಿಸಿದರು.
ಗುರುಭವನಕ್ಕೆ ಬೇಕಾದ ಪೂರಕ ವ್ಯವಸ್ಥೆ ಗಳನ್ನು ಮಾಡಲು ಸರಕಾರದ ಜೊತೆ ಪ್ರಯತ್ನಿಸುತ್ತೇನೆ. ವಸತಿ ಸಮುಚ್ಚಯ ನಿರ್ಮಾಣದ ಬಗ್ಗೆಯೂ ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಪೂರ್ಣವಾದ ಬೆಂಬಲ ನೀಡುತ್ತೇನೆ ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅದ್ಯಕ್ಷ ಉಮಾನಾಥ ರೈ ಮೇರಾವು ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅದ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾ ಅದ್ಯಕ್ಷ ರಾಮಕೃಷ್ಣ ಆಳ್ವ, ತಹಶಿಲ್ದಾರ ಪುರಂದರ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಸಿಪ್ರಿಂಯಾನ್ ಮಿರಾಂಡ, ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್, ಸಿವಿಲ್ ಇಂಜಿನಿಯರ್ ರಾಮ್ ಪ್ರಸಾದ್, ಮಾಜಿ ಅಧ್ಯಕ್ಷ ರುಗಳಾದ ನಾರಾಯಣ ಬೆಳ್ಚಾಪ್ಪಾಡ, ಮೋಹನ್ ರಾವ್, ಸಂಘದ ಖಜಾಂಚಿ ಜೆ. ಜನಾರ್ದನ, ಉಪಾಧ್ಯಕ್ಷ ರುಗಳಾದ ಸುನಂದ ಕೆ.ಪಿ.ಹರಿಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.