ಮಂಗಳೂರು, ಜೂ30(Daijiworld News/SS): ಗಣೇಶ ಚೌತಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಒತ್ತಡ ನಿವಾರಣೆಗೆ ಕೊಂಕಣ ರೈಲ್ವೆ ಮಾರ್ಗದಲ್ಲಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಮಂಗಳೂರು - ಮುಂಬೈ ನಡುವೆ ಸಾಪ್ತಾಹಿಕ ಮೂರು ವಿಶೇಷ ರೈಲುಗಳು ವಿಶೇಷ ದರದಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಣೆ ನಿಟ್ಟಿನಲ್ಲಿ ಸಂಚರಿಸಲಿವೆ ಎಂದು ಕೊಂಕಣ ರೈಲ್ವೆ ಪತ್ರಿಕಾ ಪ್ರಕಟಣೆ ತಿಳಿಸಿದೆ.
ನಂ. 09001 ರೈಲು ಮುಂಬೈ ಸೆಂಟ್ರಲ್ನಿಂದ ಆ. 28, ಸೆ. 4, 11ರಂದು ರಾತ್ರಿ 11.55ಕ್ಕೆ ಹೊರಟು ಆ. 29, ಸೆ. 5, 12ರ ರಾತ್ರಿ 9.55ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ನಂ. 09002ರೈಲು ಮಂಗಳೂರು ಜಂಕ್ಷನ್ ನಿಂದ ಆ. 29, ಸೆ. 5, 12 ರ ರಾತ್ರಿ 11.55ಕ್ಕೆ ಹೊರಟು ಆ. 30, ಸೆ. 6, 13ರ ರಾತ್ರಿ 10.25ಕ್ಕೆ ಮುಂಬೈ ಸೆಂಟ್ರಲ್ ಸೇರಲಿದೆ. ರೈಲು 18 ಬೋಗಿಗಳನ್ನು ಹೊಂದಿದೆ.
ನಂ. 09009 ರೈಲು ಬಾಂದ್ರಾ ಟರ್ಮಿನಲ್ನಿಂದ ಸೆ. 3, 10ರಂದು ರಾತ್ರಿ 11.45ಕ್ಕೆ ಹೊರಟು ಸೆ. 4, 11ರ ರಾತ್ರಿ 9.55ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ನಂ. 09010 ರೈಲು ಮಂಗಳೂರು ಜಂಕ್ಷನ್ನಿಂದ ಸೆ. 4, 11ರ ರಾತ್ರಿ 11.55ಕ್ಕೆ ಹೊರಟು ಸೆ. 5, 12ರ ರಾತ್ರಿ 10ಕ್ಕೆ ಬಾಂದ್ರಾ ಟರ್ಮಿನಲ್ ಸೇರಲಿದೆ. ರೈಲು 20ಬೋಗಿಗಳನ್ನು ಹೊಂದಿದೆ.
ನಂ.09011 ರೈಲು ಬಾಂದ್ರಾ ಟರ್ಮಿನಲ್ನಿಂದ ಸೆ. 1, 8ರ ರಾತ್ರಿ 11.45ಕ್ಕೆ ಹೊರಟು ಸೆ. 2, 9ರ ರಾತ್ರಿ 9.55ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ನಂ. 09012 ರೈಲು ಮಂಗಳೂರು ಜಂಕ್ಷನ್ನಿಂದ ಸೆ. 2,9ರ ರಾತ್ರಿ 11.55ಕ್ಕೆ ಹೊರಟು ಸೆ. 3, 11ರ ರಾತ್ರಿ 10ಗಂಟೆಗೆ ಬಾಂದ್ರಾ ಟರ್ಮಿನಲ್ ಸೇರಲಿದೆ. ರೈಲು 18 ಬೋಗಿಗಳನ್ನು ಹೊಂದಿದೆ.
ಮೂರೂ ರೈಲುಗಳಿಗೆ ಬೊರಿವಿಲಿ, ವಸಾಯಿ ರೋಡ್, ಪನ್ವೆಲ್, ರೋಹಾ, ಮನಗಾಂವ್, ವೀರ್, ಖೇಡ್, ಚಿಪ್ಳೂಣ್, ಸಂಗಮೇಶ್ವರ ರೋಡ್, ರತ್ನಗಿರಿ, ರಾಜಾಪುರ್ ರೋಡ್, ವೈಭವ್ವಾಡಿ ರೋಡ್, ಕಂಕವಲಿ, ಕುಡಾಲ್, ಸಾವಂತವಾಡಿ ರೋಡ್, ಮದುರೆ, ಥಿವಿಂ, ಮಡಗಾಂವ್ ಜಂಕ್ಷನ್, ಕಾರವಾರ, ಕುಮಟಾ, ಭಟ್ಕಳ, ಮೂಕಾಂಬಿಕಾ ರೋಡ್(ಬೈಂದೂರು), ಕುಂದಾಪುರ, ಉಡುಪಿ, ಮೂಲ್ಕಿ, ಸುರತ್ಕಲ್ ಸ್ಟೇಶನ್ಗಳಲ್ಲಿ ನಿಲುಗಡೆಯಿದೆ. ಜೊತೆಗೆ, ಈ ರೈಲುಗಳಿಗೆ ವಿಶೇಷ ಪ್ರಯಾಣ ದರ ನಿಗದಿ ಮಾಡಲಾಗಿದೆ ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್.ಕೆ.ವರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.