ಹುಬ್ಬಳ್ಳಿ, ಡಿ 9: ರಾಜ್ಯದ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಪ್ರಜಾಕೀಯ ಪಕ್ಷಕ್ಕೆ ಆಟೊ ಚಿಹ್ನೆ ದೊರೆತಿದೆ ಎಂದು ನಟ ಉಪೇಂದ್ರ ಹೇಳಿದ್ದಾರೆ.
ರಾಜ್ಯದ 224 ಕ್ಷೇತ್ರಗಳಲ್ಲಿ ಪ್ರಜಾಕೀಯ ಸ್ಪರ್ಧಿಸಲಿದೆ. ಅಭ್ಯರ್ಥಿಗಳ ಆಯ್ಕೆ, ಅವರ ಸರಿ-ತಪ್ಪುಗಳಿಗೆ ನಾನೇ ಹೊಣೆಯಾಗಿದ್ದೇನೆ. ಅಭಿವೃದ್ಧಿ, ಶಿಕ್ಷಣ, ವೈದ್ಯಕೀಯ ಸೇವೆ, ಜನ ಸೇವೆಯ ಮುಖ್ಯ ಉದ್ದೇಶದಿಂದಲೇ ಪ್ರಜಾಕೀಯ ಕೆಲಸ ಮಾಡಲು ಹೊರಟಿದೆ ಎಂದು ತಿಳಿಸಿದರು.
ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಜಾಕೀಯ ಕೆಲಸ ಮಾಡಲಿದೆ. ಜಾತಿ, ಧರ್ಮ, ಭಾವನಾತ್ಮಕ ವಿಚಾರಗಳಿಂದ ಚುನಾವಣೆ ವ್ಯವಸ್ಥೆ ದೂರವಿರಬೇಕು ಎಂದು ಹೇಳಿದರು.
ಇನ್ನೂ ಪ್ರಜಾಕೀಯ ಪಕ್ಷಕ್ಕೆ ಆಟೊ ಚಿಹ್ನೆ ದೊರೆತಿದೆ. ಆಟೊ ಎಂದಾಕ್ಷಾಣ ಎಲ್ಲರಿಗೂ ನೆನಪಾಗುವುದು ಶಂಕರ್ನಾಗ್. ಕರ್ನಾಟಕದ ಅಭಿವೃದ್ಧಿ ಬಗ್ಗೆ ಅವರಿಗೆ ಕನಸಿತ್ತು. ನಮ್ಮೆಲ್ಲರ ನೆಚ್ಚಿನ ನಟ ಶಂಕರನಾಗ್ ಅವರ ಕನಸನ್ನು ನಾವೆಲ್ಲರೂ ಸೇರಿ ನನಸು ಮಾಡಬೇಕು ಎಂದು ಹೇಳಿದರು.