ಕಾಸರಗೋಡು, ಅ. 07 (DaijiworldNews/AK): ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಅಗ್ನಿಗಾಹುತಿಯಾದ ಘಟನೆ ಬೇಕೂರು ಪುಲಿಕುತ್ತಿ ಎಂಬಲ್ಲಿ ಬೆಳಗ್ಗಿನ ಜಾವ ಬೆಳಕಿಗೆ ಬಂದಿದೆ.

ಪ್ರವೀಣ್ ಶೆಟ್ಟಿ ಎಂಬವರ ಬೈಕ್ ರವಿವಾರ ರಾತ್ರಿ ಬೆಂಕಿಗಾಹುತಿಯಾಗಿದೆ. ಬೆಂಕಿಗೆ ಬೈಕ್ ಸಂಪೂರ್ಣ ಸುಟ್ಟು ಕರಕಲು ಆಗಿದೆ. ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದೆ. ಕುಂಬಳೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.