ಪಡುಬಿದ್ರಿ ಡಿ 10: ಚಿನ್ನಾಭರಣ-ನಗದು ಸಹಿತ ಕಳ್ಳತನ ನಡೆದ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಇನ್ನಾ ಗ್ರಾಮದ ಮುಕಮ್ಮಾರ್ ಚರ್ಚ್ ಬಳಿಯ ಡ್ರೀಮ್ಸ್ ಎಂಬ ಮನೆಯಲ್ಲಿ ನಡೆದಿದೆ.
ನಂದಳಿಕೆ ಬೋರ್ಡ್ ಶಾಲೆಯಲ್ಲಿ ಅಧ್ಯಾಪಿಕೆಯಾಗಿ ಕೆಲಸ ಮಾಡುತ್ತಿರುವ ಫ್ಲಾವಿಯ ಪಿಂಟೋ ರವರ ಮನೆಗೆ ಶುಕ್ರವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬೀಗ ಮುರಿದು ಒಳ ಹೊಕ್ಕ ಕಳ್ಳರು ಕೋಣೆಯೊಳಗಿದ್ದ ಕಪಾಟನ್ನು ಮುರಿದು ಅದರಲ್ಲಿದ್ದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ.
ಮನೆಯಲ್ಲಿ ಮದುವೆ ಕಾರ್ಯಕ್ಕೆಂದು ಚಿನ್ನಾಭರಣ ಮಾಡಿ ಇಟ್ಟಿದ್ದರು. ನಾಲ್ಕು ಪವನಿನ ಕರಿಮಣಿ ಸರ,ಹತ್ತು ಪವನಿನ ಚೈನು,ಒಂದು ಪವನಿ ತೂಕದ ಕಿವಿಯೋಲೆ ಮತ್ತು ಎರಡು ಉಂಗುರ ಮತ್ತು ಚೈನು ಕಳವಾಗಿದೆ ಎಂದು ಫ್ಲಾವಿಯಾ ಪಿಂಟೋ ಹೇಳಿದ್ದಾರೆ. ಇವರು ಮದುವೆ ಆಮಂತ್ರಣ ಹಂಚಲು ಮೂಡುಬಿದಿರೆಗೆ ತೆರಳಿ ತನ್ನ ತಾಯಿ ಮನೆಯಲ್ಲಿ ತಂಗಿದ್ದರು. ಬೆಳಿಗ್ಗೆ ಬಂದಾಗ ಪ್ರಕರಣ ಬೆಳಕೆಗೆ ಬಂದಿದೆ. ಪಡುಬಿದ್ರಿ ಪೋಲಿಸರು ಶ್ವಾನದಳದೊಂದಿಗೆ ತಪಾಸಣೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.