ಮೂಡುಬಿದಿರೆ ಡಿ: ನಾಳೆ ಅಂದರೆ ಡಿ.11 ರಂದು ಹಸೆಮಣೆ ಏರಬೇಕಾಗಿದ್ದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಮೂಡಬಿದ್ರೆಯ ದರೆಗುಡ್ಡೆಯಲ್ಲಿ ನಡೆದಿದೆ. ದರೆಗುಡ್ಡೆ ಗ್ರಾಮದ ಸ್ಥಳೀಯ ನಿವಾಸಿ ಪ್ರಿಯಾಂಕ (25) ನಾಪತ್ತೆಯಾದವಳು. ಡಿ 9 ರಂದು ರಾತ್ರಿ ಊಟ ಮಾಡಿ ಮಲಗಿದ ಆಕೆ ಬೆಳಿಗ್ಗೆ ಎದ್ದು ಹುಡುಕಾಡಿದಾಗ ಕಾಣೆಯಾಗಿದ್ದಳು. ಈಕೆಗೆ ವಿದೇಶದಲ್ಲಿರುವ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಶನಿವಾರ ಮೆಹಂದಿ ಕಾರ್ಯಕ್ರಮ ನಡೆಯಬೇಕಿತ್ತು. ಮುನ್ನಾ ದಿನ ರಾತ್ರಿ ಊಟ ಮಾಡಿ ಮಲಗಿದ ಆಕೆ ಬೆಳಿಗ್ಗೆ ನಾಪತ್ತೆಯಾಗಿದ್ದಳು. ಅವರ ಸಹೋದರ ಸುದರ್ಶನ್ ಈ ಕುರಿತು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.