ಮಂಗಳೂರು, ಜು 01 (Daijiworld News/SM): ಶಾಸಕ ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ನನಗೆ ಯಾವ ಮಾಹಿತಿಯೂ ಇಲ್ಲ. ಮಾಧ್ಯಮದ ಮೂಲಕವೇ ನನಗೆ ಮಾಹಿತಿ ಲಭಿಸಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಂಗಳೂರಿನಲ್ಲಿ ಹೇಳಿದ್ದಾರೆ.
ಅನಂದ್ ಸಿಂಗ್ ಪಕ್ಷದ ಬದ್ಧತೆಯ ಶಾಸಕರಾಗಿದ್ದರು. ಈ ಕಾರಣ ಅವರು ರಾಜಿನಾಮೆ ನೀಡಿರಲು ಸಾಧ್ಯವಿಲ್ಲ ಎಂಬುದು ನನ್ನ ಭಾವನೆ. ಮೈತ್ರಿ ಸರಕಾರ ಮುರಿದು ಬೀಳುತ್ತದೆ ಎಂಬ ಮಾತು ಸುಮಾರು ಒಂದೂವರೆ ವರ್ಷಗಳಿಂದ ಕೇಳಿ ಬರುತ್ತಿದೆ. ಐದು ಶಾಸಕರ ರಾಜೀನಾಮೆಯಿಂದ ಸರ್ಕಾರ ಕೆಡವಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಮೈತ್ರಿ ಸರಕಾರ ಸುಭದ್ರವಾಗಿದೆ ಎಂದು ಸಚಿವ ಖಾದರ್ ಹೇಳಿದರು.