ಮಂಗಳೂರು, ಡಿ 10: ನಂತೂರು ವೃತ್ತಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ ದ.ಕ ಜಿಲ್ಲಾ ಯುವ ಜನತಾದಳ ಡಿ 09 ರ ಶನಿವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಅವರು ನಂತೂರು ಸರ್ಕಲ್ ಸಾವಿನ ತಾಣವಾಗಿ ಮಾರ್ಪಟ್ಟಿದ್ದು, ಹಲವಾರು ಅಫಘಾತಗಳು ನಡೆದು ಅಮಾಯಕರು ಜೀವಗಳನ್ನು ಕಳೆದುಕೊಂಡಿದ್ದಾರೆ. ಇಷ್ಟೊಂದು ಅನಾಹುತಗಳು ನಡೆದರೂ ಜನಪ್ರತಿನಿಧಿಗಳು ಈ ಬಗ್ಗೆ ಜಾಣ ಮೌನವನ್ನು ವಹಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆಯನ್ನು ನಿರ್ಮಿಸುವುದು ಕೇಂದ್ರ ಸರಕಾರದ ಜವಾಬ್ದಾರಿಯಾಗಿದ್ದು, ಈ ಕ್ಷೇತ್ರದಿಂದ ಆಯ್ಕೆಯಾದ ಸಂಸದ ನಳಿನ್ ಕುಮಾರ್ ಕಟೀಲ್ ಈ ವಿಷಯವನ್ನು ಸಂಪೂರ್ಣವನ್ನು ನಿರ್ಲಕ್ಷಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಜಿಲ್ಲೆಗೆ ಬೆಂಕಿ ಕೊಡುವುದಾಗಿ ಹೇಳಿ ಭಾಷಣ ಮಾಡುವುದಕ್ಕೆ ಸಮಯವಿದ್ದು, ಜನರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಮಯವಿಲ್ಲವಾಗಿದೆ ಎಂದರು. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಇದೇ ರಸ್ತೆಯಿಂದ ಹಾದು ಹೋಗುತ್ತಿದ್ದರೂ ಕೂಡ ಜನರ ಸಮಸ್ಯೆಯನ್ನು ಪರಿಹರಿಸಲು ಗಮನಹರಿಸುತ್ತಿಲ್ಲ. ಆದಷ್ಟು ಬೇಗ ನಂತೂರಿನಲ್ಲಿ ಅಗತ್ಯವಿರುವ ಮೇಲ್ಸೇತುವೆಯನ್ನು ನಿರ್ಮಿಸದೇ ಹೋದಲ್ಲಿ ಜೆಡಿಎಸ್ ವತಿಯಿಂದ ಉಗ್ರವಾದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ನಾಯಕರುಗಳಾದ ಪ್ರವೀಣ್ ಚಂದ್ರ ಜೈನ್, ರಾಮ್ ಗಣೇಶ್, ಗೋಪಾಲಕೃಷ್ಣ ಅತ್ತಾವರ , ನಾಸೀರ್, ರತ್ನಕರ್ ಸುವರ್ಣ,ಕ್ಷೇತ್ರ ಅಧ್ಯಕ್ಷ ವಸಂತ ಪೂಜಾರಿ, ಯುವ ನಾಯಕರುಗಳಾದ ಮಧುಸೂದನ ಗೌಡ, ಶ್ರೀನಾಥ್ ರೈ, ರತೀಶ್ ಕರ್ಕೇರ, ಲಿಖಿತ್ ರಾಜ್, ಭರತ್, ದೀಪಕ್, ನಿಲಿತ್ ಕೂಟ್ಟಾರಿ, ಧನುಷ್ ಶೆಟ್ಟಿ, ಮೇಬೂಬ್, ಕುಂಞ, ಖಲ್ದರ್, ಅಶ್ರಫ್, ಸತ್ತಾರ್, ಹೀತೇಶ್ ರೈ, ಸರ್ಮಥ್, ವಿಧ್ಯಾರ್ಥಿ ನಾಯಕರುಗಳಾದ ಸೀನಾನ್, ತೇಜಸ್ ನಾಯಕ್, ಕೌಶಿಕ್,ಲಾಯಿಡ್ ಉಪಸ್ಥಿತರಿದ್ದರು