ಬೆಂಗಳೂರು ಡಿ 10: ಪ್ರೀತಿಸಿದಾಕೆಯ ಕೈ ಹಿಡಿಯಲು ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕಾರ್ಪೊರೇಟರ್ನ ಮಗನೊಬ್ಬ ತನ್ನ ತಂದೆಗೇ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ ತ್ಯಾಗರಾಜನಗರದಲ್ಲಿ ನಡೆದಿದೆ. ಪಾಲಿಕೆಯ ಸದಸ್ಯ ಸಂಗಾತಿ ವೆಂಕಟೇಶ್ ಅವರ ಪುತ್ರ ಸಾಗರ್ ಪ್ರೀತಿಸಿ ಮದುವೆಯಾಗೋದಕ್ಕೆ ಅವರು ಬಲವಾಗಿ ವಿರೋಧಿಸಿದ್ದರು. ಈ ಹಿಂದೆಯೂ ಈ ವಿಚಾರವಾಗಿ ಹಲವಾರು ಬಾರಿ ಮನಸ್ತಾಪ ನಡೆದಿದ್ದವು. ಆದರೆ ಡಿ 10 ರ ಭಾನುವಾರ ಮಾತ್ರ ಈ ಜಗಳ ತಾರಕ್ಕಕ್ಕೆ ಏರಿದಾಗ ಮಗ ಸಾಗರ್ ತ್ಯಾಗರಾಜನಗರದ ತಮ್ಮ ಮನೆಯಲ್ಲಿ ಕೋಪದ ಭರದಲ್ಲಿ ಚಾಕುವಿನಿಂದ ತಂದೆ ವೆಂಕಟೇಶ್ಗೆ ಇರಿದಿದ್ದಾನೆ. ಗಂಬೀರ ಗಾಯಗೊಂಡ ವೆಂಕಟೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ತ್ಯಾಗರಾಜನಗರ ಪೊಲೀಸರು ಸಾಗರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.