ಮಂಗಳೂರು ಡಿ 10 : ಕಾರೊಂದು ನಿಯಂತ್ರಣ ತಪ್ಪಿ ಮರವೂರು ನದಿಗೆ ಬಿದ್ದು ಇಬ್ಬರು ಯುವತಿಯರು ಪ್ರಾಣಪಾಯದಿಂದ ಪಾರಾದ ಘಟನೆ ಡಿ 10 ರ ಭಾನುವಾರ ಬೆಳಗ್ಗೆ ನಡೆದಿದೆ. ಬಜ್ಪೆ ಹಾಗೂ ಕೇರಳ ಮೂಲದ ಸುಮಾರು 20-22 ವಯಸ್ಸಿನ ಯುವತಿಯರು ಬಾಡಿಗೆ ಕಾರೊಂದನ್ನು ಪಡೆದು ಕೇರಳದಿಂದ ಬಂದಿದ್ದ ಪೋಷಕರನ್ನು ಕರೆದುಕೊಂಡು ಬರಲೆಂದು ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಮರವೂರು ಸೇತುವೆ ಬಳಿ ಬರುವಾಗ ಇಬ್ಬರಿಗೂ ಅಲ್ಲೆ ಇದ್ದ ಚೆಕ್ ಡ್ಯಾಂ ನೋಡುವ ಮನಸ್ಸಾಗಿದ್ದು ಅಲ್ಲಿಗೆ ಹೋಗಿ ಹಿಂದಿರುಗುವಾಗ ನಿಯಂತ್ರಣ ಕಳೆದುಕೊಂಡ ಕಾರ್ ಅಣೆಕಟ್ಟಿನ ನೀರಿಗೆ ಬಿದ್ದಿದೆ. ಮುಳುಗುತ್ತಿರುವ ಕಾರನ್ನು ನೋಡಿದ ತಕ್ಷಣ ಸ್ಥಳೀಯರು ಧಾವಿಸಿ ನೀರುಪಾಲಾಗುತ್ತಿದ್ದ ಯುವತಿಯರನ್ನು ರಕ್ಷಿಸಿದ್ದಾರೆ. ಬಜ್ಪೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಹಾಗೂ ಕ್ರೇನ್ ನ ಸಹಾಯದಿಂದ ನದಿಯಿಂದ ಕಾರನ್ನು ದಡಕ್ಕೆ ತರಲಾಯಿತು.