ಮಂಗಳೂರು ಡಿ 10: ನಗರದ ಕದ್ರಿ ಪಾರ್ಕ್ ನಲ್ಲಿ ಅಂತಾರಾಷ್ಟ್ರೀಯ ದ್ರಾಕ್ಷಾರಸ ಉತ್ಸವ - 2017'ಕ್ಕೆ ಡಿ 9 ರ ಶನಿವಾರ ಚಾಲನೆ ದೊರಕಿದೆ. ವಿವಿಧ ದೇಶಗಳ ವೈನ್ ಇಲ್ಲಿ ದೊರೆಯುತ್ತಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಸುಮಾರು 15 ವೈನರಿ ಸಂಸ್ಥೆಗಳು ಭಾಗವಹಿಸಿದೆ. ವಿವಿಧ ವೈನ್ ಮಾರಾಟ ಉತ್ಸವದಲ್ಲಿ ವಿವಿಧ ಕಂಪೆನಿಗಳ 10 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಬೇರೆ ಬೇರೆ ಬ್ರ್ಯಾಂಡ್ಗಳ ವೈನ್ಗಳನ್ನು ಮಾರಾಟಕ್ಕಿಡಲಾಗಿದೆ.
ಕೆಲವು ಮಳಿಗೆಯಲ್ಲಿ ಗ್ರಾಹಕರಿಗೆ ವೈನ್ ಗಳನ್ನು ರುಚಿ ನೋಡುವ ಅವಕಾಶಗಳನ್ನು ಕಲ್ಪಿಸಲಾಗಿದ್ದು , ರುಚಿ ನೋಡಿ ಮರುಳಾದ ವೈನ್ ಪ್ರೀಯರು ವೈನ್ ಖರೀದಿಗೆ ತಾಮುಂದು ನಾಮುಂದು ಎಂದು ಮುಗಿಬೀಳುತ್ತಿದ್ದಾರೆ.
'ಕರ್ನಾಟಕ ದ್ರಾಕ್ಷಾರಸ ಮಂಡಳಿ' ಮತ್ತು 'ತೋಟಗಾರಿಕೆ ಇಲಾಖೆ' ಸಹಯೋಗದಲ್ಲಿ ನಡೆಯುತ್ತಿರುವ ಈ ವೈನ್ ಮೇಳದಲ್ಲಿ ಸುಮಾರು 150ಕ್ಕೂ ಹೆಚ್ಚು ಬ್ರಾಂಡ್ಗಳನ್ನು ಉತ್ಸವದಲ್ಲಿ ಪ್ರದರ್ಶಿಸಲಾಗಿದೆ. ಯುರೋಪ್ ನ ವೈನ್ ಗಳು ಸೇರಿದಂತೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಚಿಲಿ, ಅಮೆರಿಕಾ ಮೊದಲಾದ ದೇಶಗಳ ವೈನ್ಗಳನ್ನು ಇಲ್ಲಿ ಪ್ರದರ್ಶನ ಮತ್ತು ಮಾರಾಟ ನಡೆಸಲಾಗುತ್ತಿದೆ.