ಕಾರ್ಕಳ, ಡಿ 10 : ರಾಜ್ಯ ಕಾಂಗ್ರೆಸ್ ಹಮ್ಮಿಕೊಂಡ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮವು ಈಗಾಗಲೇ ಶೇ. 85 ಪೂರ್ಣಗೊಂಡಿದ್ದು, ರಾಜ್ಯ ಸರಕಾರದ ಜನಪರ ಯೋಜನೆಗಳು ಆರ್ಹ ಫಾಲಾನುಭವಿಗಳಿಗೆ ತಲುಪಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸರಕಾರದ ಈ ಸಾಧನೆಗಳು ಕಾಂಗ್ರೆಸ್ ಪಕ್ಷಕ್ಕೆ ಜನಾಶೀರ್ವಾದವಾಗಿ ಪರಿವರ್ತನೆಯಾಗಲಿದೆ ಎಂದು ನಿಕಟ ಪೂರ್ವ ಶಾಸಕ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಗೋಪಾಲ ಭಂಡಾರಿ ಹೇಳಿದರು.
ಪ್ರಿಯದರ್ಶಿನಿ ಕಚೇರಿಯಲ್ಲಿ ಡಿ 10 ರಂದು ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಅಧಿಕಾರ ವಿಕೇಂದ್ರೀಕರಣದಲ್ಲಿ ವಿಶ್ವಾಸವಿರಿಸಿದ್ದು, ಆ ನೆಲೆಯಲ್ಲಿ ರಾಜ್ಯದಲ್ಲಿ 50 ತಾಲೂಕು 460 ಹೊಸ ಗ್ರಾಮ ಪಂಚಾಯತ್ಗಳನ್ನು ಘೋಷಿಸಿದೆ. ರಾಜ್ಯದ 6 ಕೋಟಿ ಜನರಲ್ಲಿ 5 ಕೋಟಿ ಜನತೆ ರಾಜ್ಯ ಸರಕಾರದ ಒಂದಲ್ಲ ಒಂದು ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಕಸ್ತೂರಿ ರಂಗನ್ ಮತ್ತು ಹುಲಿ ಯೋಜನೆಯನ್ನು ರಾಜ್ಯ ಸರಕಾರದ ವಿವರಣಾತ್ಮಕ ಅಕ್ಷೇಪದ ಹೊರತಾಗಿಯೂ ಕೇಂದ್ರದ ಬಿಜೆಪಿ ಸರಕಾರ ಈ ಸಮಸ್ಸೆಯನ್ನು ಜೀವಂತವಿರಿಸಲು ಬಯಸಿದೆ. ಈ ಬಗ್ಗೆ ಕೇಂದ್ರ ಸರಕಾರದ ಸ್ವಷ್ಟ ನಿಲುವನ್ನು ನಾವು ನಿರೀಕ್ಷಿಸುತ್ತಿದ್ದೇವೆ.ಅದಾಗ್ಯು ಅಂದು ಇದರ ವಿರುದ್ಧ ರಾಜಕೀಯ ಕಾರಣಕ್ಕಾಗಿ ಹೋರಾಟ ನಡೆಸಿದವರು ಇಂದು ಯಾಕೆ ಮೌನಿಗಳಾಗಿದ್ದಾರೆ ಎಂದು ಅವರು ಪ್ರಶ್ನಿಸಿದರು. ಯಾವುದೇ ಕಾರಣದಿಂದಲೂ ರಾಜ್ಯದಲ್ಲಿ ಹುಲಿ ಯೋಜನೆಯಾಗಲಿ, ಕಸ್ತೂರಿರಂಗನ್ ವರದಿ ಜಾರಿಗೊಳಿಸಲು ರಾಜ್ಯ ಸರಕಾರ ಅವಕಾಶ ನೀಡುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪಡುಬಿದ್ರಿ-ಕುದುರೆಮುಖ ರಾಜ್ಯ ಹೆದ್ದಾರಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಸಾಲದ ಮೂಲಕ ಅಭಿವೃದ್ಧಿಗೊಂಡಿದ್ದು, ಇದರ ಕ್ರಿಯಾಯೋಜನೆ ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿತ್ತು. ಬೆಳ್ಮಣ್ನಲ್ಲಿ ಟೋಲ್ಗೇಟ್ ನಿರ್ಮೀಸುವ ನಿರ್ಧಾರ ಅಂದಿನ ಬಿಜೆಪಿ ಸರಕಾರದ್ದೇ ಹೊರತು ಇಂದಿನ ರಾಜ್ಯ ಸರಕಾರದಲ್ಲ. ಬಿಜೆಪಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಬೆಳ್ಮಣ್ ಟೋಲ್ಗೇಟ್ ನಿರ್ಮಾಣಕ್ಕೆ ನನ್ನ ಸ್ವಷ್ಟ ವಿರೋಧ ಇರುವುದಾಗಿ ಅವರು ಸ್ವಷ್ಟಪಡಿಸಿದರು.
94 ಸಿ, 94 ಸಿ ಡಿ ಮತ್ತು ಅಕ್ರಮ ಸಕ್ರಮ ಯೋಜನೆಗಳು ಈಗಾಗಲೇ ಜನರ ಮನಸ್ಸನ್ನು ಗೆದ್ದಿವೆ. ಸರಕಾರ ಈಗಾಗಲೇ ಒಕ್ಕಲು ಮಸೂದೆಯ ರೀತಿಯಲ್ಲಿ ವಾಸಿಸುವವನೇ ಮನೆಯೊಡಯ ಕಾನೂನನ್ನು ತರಲು ಉದ್ದೇಶಿಸಿದೆ. ಸರಕಾರ ಕೃಷಿ ಮತ್ತು ನೀರಾವರಿಗೆ ಹೆಚ್ಚಿನ ಒತ್ತು ನೀಡಿದ್ದು, ರಾಜ್ಯ ಸರಕಾರ ಕೇವಲ ಕಿರುನೀರಾವರಿಗಾಗಿ 5236 ಸಾವಿರ ಕೋಟಿ ರೂ. ಯೋಜನೆಗಳನ್ನು ಹಮ್ಮಿಕೊಂಡಿತ್ತು. ಆ ಮೂಲಕ ವಿಧಾನಸಭಾ ಪ್ರತಿ ಕ್ಷೇತ್ರಗಳು 32 ರಿಂದ 35 ಕೊಟಿ ವೆಚ್ಚದ ಕಾರ್ಯ ಯೋಜನೆಗಳನನು ಹಮ್ಮಿಕೊಳ್ಳುವಂತಾಗಿದೆ ಇದು ರಾಜ್ಯ ಸರಕಾರದ ಸಾಧನೆಯಾಗಿದೆ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.