ಮಂಗಳೂರು, ಜು04(Daijiworld News/SS): ಮನೆ ಕಳವು ಪ್ರಕರಣದ ಆರೋಪಿಯೋರ್ವನನ್ನು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಬಂಧಿತ ಆರೋಪಿಯನ್ನು ನಿಶಾನ್ ಸೂರಜ್ ಮೆನೆಜಸ್ (28) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಯಿಂದ ಸುಮಾರು 12 ಗ್ರಾಂ ತೂಕದ ಚಿನ್ನಾಭರಣ, ಲ್ಯಾಪ್ ಟ್ಯಾಪ್, ಪೆನ್ ಡ್ರೈವ್, ಹಾರ್ಡ್ ಡಿಸ್ಕ್. ಮೊಬೈಲ್ ಸೇರಿದಂತೆ ಒಟ್ಟು ಸುಮಾರು 1,15,000/- ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಘಟನೆಯ ವಿವರ:
ಆರೋಪಿ ನಿಶಾನ್ ಸೂರಜ್ ಮೆನೆಜಸ್ ಅತ್ತಾವರದ ರೋಶನಿ ಅಪಾರ್ಟ್'ಮೆಂಟ್'ನ ಮನೆಯಿಂದ ಜೂ28ರಂದು ಫ್ಲಾಟಿನ ಬಾಗಿಲಿನ ಲಾಕನ್ನು ತೆಗೆದು ಒಳಪ್ರವೇಶಿಸಿದ್ದಾನೆ. ಬಳಿಕ ಫ್ಲಾಟ್'ನಲ್ಲಿದ್ದ ಸುಮಾರು 18 ಗ್ರಾಂ ತೂಕದ ಚಿನ್ನಾಭರಣ, ಲ್ಯಾಪ್ ಟಾಪ್, ಮೊಬೈಲ್, ಹಾರ್ಡ್ ಡಿಸ್ಕ್, ಪೆನ್ ಡ್ರೈವ್, ಹಾಗೂ ವಾಚ್ ಸೇರಿದಂತೆ ಒಟ್ಟು 1,53,000/- ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾನೆ. ಈ ಬಗ್ಗೆ ಡಿಲ್ಸನ್ ಲೋಬೊರವರು ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.