ಕಾಸರಗೋಡು, ಜು 04 (Daijiworld News/MSP): ವಿದ್ಯಾರ್ಥಿನಿಯೋರ್ವಳು ಕಿಟಿಕಿ ಸರಳಿಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಚಟ್ಟಂಚಾಲ್’ನಲ್ಲಿ ನಡೆದಿದೆ. ಮೈಲಾಟಿಯ ಸಜಿತ್ ಎಂಬವರವರ ಪುತ್ರಿ ಆರಾಧ್ಯ (13) ಮೃತಪಟ್ಟವರು.
ಈಕೆ ಚಟ್ಟಂಚಾಲ್ ಸರಕಾರಿ ಹಯರ್ ಸೆಕಂಡರಿ ಶಾಲೆಯ ಎಂಟನೇ ವಿದ್ಯಾರ್ಥಿನಿಯಾಗಿದ್ದಳು. ಕ್ಲಾಸ್ ಪರೀಕ್ಷೆಯಲ್ಲಿ ಆರಾಧ್ಯಾಳಿಗೆ ಮಾರ್ಕ್ ಕಡಿಮೆಯಾಗಿದ್ದು, ಇದರಿಂದ ನೊಂದುಕೊಂಡಿದ್ದಳು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬುಧವಾರದಂದು ಸಮಾಜ ವಿಜ್ಞಾನ ಕ್ಲಾಸ್ ಪರೀಕ್ಷೆ ನಡೆದಿತ್ತು. ಪರೀಕ್ಷೆಯಲ್ಲಿ ಅಂಕ ಲಭಿಸಿದ ಹಿನ್ನಲೆಯಲ್ಲಿ ಬೇಸತ್ತಿದ್ದಳು ಎನ್ನಲಾಗಿದೆ.
ವಿದ್ಯಾನಗರ ಠಾಣಾ ಪೊಲೀಸರು ಮೃತದೇಹದ ಮಹಜರು ನಡೆಸಿದ್ದು , ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಿದೆ.