ಕೊಯಂಬತ್ತೂರು: ಇಲ್ಲಿನ ಮದಂಪಾಳಯಂ ಎಂಬಲ್ಲಿ ಕ್ರಿಸ್ ಮಸ್ ಆಚರಣೆ ನಡೆಯುತ್ತಿದ್ದ ಪ್ರಾಥನಾ ಕೇಂದ್ರಕ್ಕೆ ಗುಂಪೊಂದು ಏಕಾಎಕಿ ನುಗ್ಗಿ ಧಾಳಿ ನಡೆಸಿದ ಬಗ್ಗೆ ವರದಿಯಾಗಿದೆ. ಧಾಳಿಯಿಂದಾಗಿ ಪ್ರಾರ್ಥನಾ ಕೇಂದ್ರದ ಪಾಸ್ಟರ್ ಹಾಗೂ ಪ್ರಾರ್ಥನೆಗೆ ಆಗಮಿಸಿದ ಕೆಲ ವಿಶ್ವಾಸಿಗಳಿಗೆ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಹಿನ್ನಲೆಯಲ್ಲಿ ಸ್ಥಳೀಯ ರಾಜಕೀಯ ನಾಯಕನ ಸಹಿತ ನಾಲ್ವರನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತನಿಖೆಯ ನಂತರವೇ ಧಾಳಿಯ ಹಿಂದಿನ ಕಾರಣ ಸ್ಪಶ್ಟಗೊಳ್ಳಲಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ನ್ಯೂ ಲೈಫ್ ಪ್ರೋಫ್ಟಿಕ್ ಚಾರಿಟೇಬಲ್ ಟ್ರಸ್ಟ್ ಇದರ ನೇತ್ರತ್ವದಲ್ಲಿ ಧಾಳಿಗೊಳಗಾದ ಪ್ರಾರ್ಥನಾ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು. ಕೆಲದಿನಗಳ ಹಿಂದೆ ಪ್ರಾರ್ಥನಾ ಕೇಂದ್ರದಲ್ಲಿ ಹಬ್ಬಗಳ ಆಚರಣೆಯ ಸಂಧರ್ಭದಲ್ಲಿ ಉಪಯೋಗಿಸುವ ಧ್ವನಿವರ್ಧಕದ ಬಗ್ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು.
ತಹಸಿಲ್ದಾರ್ ಪ್ರಾರ್ಥನಾ ಕೇಂದ್ರವನ್ನು ಮುಚ್ಚುವಂತೆ ಅದೇಶ ನೀಡಿದ್ದರೂ ಸಂಬಂಧಪಟ್ಟರು ಇದನ್ನು ಗಣನೆಗೆ ತೆಗೆದುಕೊಳ್ಳದೆ ಕ್ರಿಸ್ ಮಸ್ ಆಚರಣೆ ನಡೆಸುತ್ತಿದ್ದರು ಎಂದು ಪ್ರಮುಖ ಪಕ್ಷವೊಂದರ ಸ್ಥಳೀಯ ಘಟಕವು ಆರೋಪಿಸಿದೆ.