ಕೇರಳದ ಶಬರಿ ಮಲೆಯಲ್ಲಿ ಮಕರ ಸಂಕ್ರಮಣದ ಸಂದರ್ಭದಲ್ಲಿ ನಡೆಯುವ ಮಕರ ಬೆಳಕು ವೀಕ್ಷಣೆಗೆ ನೆರೆಯುವ ಲಕ್ಷಾಂತರ ಮಂದಿಯ ನಡುವೆ ಮಕ್ಕಳು ಕಳೆದು ಹೋಗುವುದು ನಡೆಯುತ್ತಿರುತ್ತದೆ. ಈ ಸಂದರ್ಭದಲ್ಲಿ ಮಕ್ಕಳು ನಾಪತ್ತೆಯಾದಲ್ಲಿ ಪತ್ತೆಹಚ್ಚಲು ನೆರವಾಗುವುದಕ್ಕೆ ರೇಡಿಯೋ ಫ್ರೀಕ್ವೆನ್ಸಿ ಗುರುತು ಟ್ಯಾಗ್'ಗಳನ್ನು ಅಳವಡಿಸುವ ಯೋಜನೆ ಇದೀಗ ಸಿದ್ಧವಾಗಿದೆ. ಕೇರಳ ಪೊಲೀಸ್ ಮತ್ತು ವೊಡಾ ಫೋನ್ ಜಂಟಿಯಾಗಿ ಯೋಜನೆಯನ್ನು ರೂಪಿಸಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಕುತ್ತಿಗೆಗೆ ಟ್ಯಾಗ್ ಅಳವಡಿಸಲಾಗುತ್ತದೆ. ಬಳಿಕ ಇದನ್ನು ಹಿಂದಿರುಗಿಸುವವರೆಗೂ ಅವರು ಇರುವ ಸ್ಥಳವನ್ನು ಗುರುತಿಸಬಹುದಾಗಿದೆ.