ಶ್ರೀನಗರ ಡಿ 11: ಉಗ್ರರೊಂದಿಗೆ ಸೇನಾ ಪಡೆ ನಡೆಸಿದ ಗುಂಡಿನ ಚಕಮಕಿಗೆ ಮೂವರು ಉಗ್ರರು ಹತರಾಗಿದ್ದಾರೆ. ಡಿ ೧೧ ರ ಸೋಮವಾರ ಮುಂಜಾನೆ ನಡೆದಿದ್ದು. ಜಮ್ಮು ಕಾಶ್ಮೀರದ ಹಂದ್ವಾರಾ ಜಿಲ್ಲೆಯ ಉನಿಸೂದಲ್ಲಿ ನಡೆದ ಎನ್ಕೌಂಟರ್ನಲ್ಲಿ ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.ದುರಂತವೆಂದರೆ ಈ ಕಾರ್ಯಾಚರಣೆ ವೇಳೆ ಓರ್ವ ನಾಗರಿಕ ಮೃತಪಟ್ಟಿದ್ದಾನೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಗುಂಡಿನ ದಾಳಿಗೆ ಸಾವನಪ್ಪಿದ ಉಗ್ರರನ್ನು ಪಾಕ್ ಮೂಲದವರೆಂಬುದು ಮಾಹಿತಿ ದೊರಕಿರುವುದಾಗಿ ಜಮ್ಮು ಕಾಶ್ಮೀರ ಡಿಜಿಪಿ ಎಸ್ ಪಿ ವೈದ್ ಟ್ವಿಟ್ ಮೂಲಕ ತಿಳಿಸಿದ್ದಾರೆ. ಎನ್ಕೌಂಟರ್ನಲ್ಲಿ ಮತ್ತೋರ್ವ ಟೆರರಿಸ್ಟ್ ಗಾಯಗೊಂಡ ಸ್ಥಿತಿಯಲ್ಲಿ ಬಂಧಿತನಾಗಿದ್ದಾನೆ.