ಕುಮಟಾ ಡಿ 11 : ಎರಡು ಕೋಮಿನ ಮಧ್ಯೆ ನಡೆದ ಸಂಘರ್ಷದಿಂದ ಕಳೆದ ನಾಲ್ಕು ದಿನಗಳಿಂದ ಸ್ತಬ್ಧವಾಗಿದ್ದ ಹೊನ್ನಾವರ ಸೋಮವಾರದಿಂದ ಸಹಜ ಸ್ಥಿತಿಗೆ ಮರಳಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ ಬೆನ್ನಲ್ಲೇ ಕುಮಟಾದಲ್ಲಿ ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ವಾಹನಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಪರೇಶ್ ಮೇಸ್ತಾ ಅನುಮಾನಾಸ್ಪದ ಸಾವು ಖಂಡಿಸಿ ಡಿ 11ರ ಸೋಮವಾರ ಬಿಜೆಪಿ ನೀಡಿದ್ದ ಬಂದ್ ಕರೆಗೆ ಬಂದೋಬಸ್ತ್ ಪರಿಶೀಲನೆ ಬಂದಿದ್ದ ಐಜಿಪಿ ನಿಂಬಾಳ್ಕರ್ ಪ್ರತಿಭಟಕಾರರು ಬೆಂಕಿಹಚ್ಚಿದ್ದಾರೆ. ಕುಮಟಾದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು,ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.