ನವದೆಹಲಿ ಡಿ 11: ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವಿರೋಧವಾಗಿ ಆಯ್ಕೆಗೊಂಡಿದ್ದು, ಇಂದು ಅಧಿಕೃತವಾಗಿ ಹೆಸರು ಹೊರಬಿದ್ದಿದೆ. ರಾಹುಲ್ ಅವರು ನೆಹರೂ-ಗಾಂಧಿ ಕುಟುಂಬದಲ್ಲಿ ಈ ಹುದ್ದೆಯನ್ನು ಅಲಂಕರಿಸಲಿರುವ 6ನೇ ನಾಯಕರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಅಡಳಿತದ ಜವಬ್ದಾರಿ ಹುದ್ದೆ ರಾಹುಲ್ ಗಾಂಧಿ ಹೆಗಲೇರಿದೆ. ಇದರೊಂದಿಗೆ ಕಳೆದ ಎರಡು ದಶಕಗಳಿಂದ ಪಕ್ಷದ ಅಧ್ಯಕ್ಷರಾಗಿ ಪಕ್ಷ ವನ್ನು ಮುನ್ನಡೆಸಿದ್ದ ಸೋನಿಯಾ ಗಾಂಧಿಯ ಆಡಳಿತದ ಯುಗಾಂತ್ಯವಾಗಿದೆ. ಇಂದು ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಕಾರಣ ರಾಹುಲ್ ಹೊರತುಪಡಿಸಿ ಬೇರೆ ಯಾವ ನಾಯಕರು ನಾಮ ಪತ್ರ ಸಲ್ಲಿಸಿಲ್ಲ. ಅದ್ದರಿಂದ ರಾಹುಲ್ ಗಾಂಧಿ ಅವರೇ ಅವಿರೋಧವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಇನ್ನು ಇವರ ಪಟ್ಟಾಭೀಷೇಕ ಡಿಸೆಂಬರ್ 16 ರಂದು ಖಚಿತವಾಗಿದೆ.