ಕೋಲ್ಕತ್ತಾ ಡಿ 11 : ಮತ್ಸ್ಯಕನ್ಯೆಯ ರೀತಿಯಲ್ಲೇ ಎರಡೂ ಕಾಲುಗಳು ಒಟ್ಟಿಗೆ ಜೋಡಿಕೊಂಡಿರುವ ಶಿಶುವಿಗೆ 23 ವರ್ಷದ ಮಹಿಳೆಯೊಬ್ಬರು ಕೋಲ್ಕತ್ತಾದಲ್ಲಿ ಜನ್ಮ ನೀಡಿದ ಘಟನೆ ನಡೆದಿದೆ. ಆದರೆ ಮಗು ಜನನದ ನಾಲ್ಕು ಗಂಟೆಯ ಒಳಗೆ ಸಾವನಪ್ಪಿದೆ. ಮತ್ಸ್ಯಕನ್ಯೆ ಅಥವಾ ಸಿರೆನೋಮೆಲಿಯಾ ಮಗು ಇಲ್ಲಿನ ಚಿತ್ತರಂಜನ್ ದೇವ ಸದನ್ ಆಸ್ಪತ್ರೆಯಲ್ಲಿ ಮುಸ್ಕರಾ ಬಿ ಬಿ (23) ಎಂಬ ಮಗುವಿಗೆ ಜನಿಸಿದೆ. ಮಗು ದೇಹದ ಕೆಳಭಾಗ ಸರಿಯಾಗಿ ಬೆಳವಣಿಗೆಯಾಗದ ಕಾರಣ ಮಗುವಿನ ಲಿಂಗ ಪತ್ತೆ ಸಾಧ್ಯವಾಗಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಮಗುವಿನ ಪೋಷಕರು ಇಬ್ಬರು ಕೂಲಿ ಕಾರ್ಮಿಕರು ಹಾಗೂ ಮುಸ್ಕಾರಾ ಗರ್ಭಿಣಿ ಆದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳದ ಪರಿಣಾಮ ಈ ರೀತಿಯ ಮಗುವಿನ ಜನನವಾಗಿದೆ ಎಂದು ಮಕ್ಕಳ ತಜ್ಞ ಡಾ. ಸುದೀಪ್ ಸಹಾ ತಿಳಿಸಿದ್ದಾರೆ . ಈ ದಂಪತಿ ಆರ್ಥಿಕತೆಯ ಸಮಸ್ಯೆಯಿಂದಾಗಿ ಮುಸ್ಕರಾ ಅಲ್ಟ್ರಾ ಸೋನೊಗ್ರಾಫಿ ಮಾಡಿಸಿರಲಿಲ್ಲ ಹೀಗಾಗಿ ಹಿಂದೆಯೇ ಮಗುವಿನ ಸ್ಥಿತಿ ಗೊತ್ತಾಗಲಿಲ್ಲ ಎಂದು ತಿಳಿಸಿದ್ದಾರೆ. ಭಾರತದಲ್ಲಿ 2ನೇ ಮತ್ಸ್ಯಕನ್ಯೆ ಯ ರೀತಿಯ ಜನಿಸಿದ ಮಗು ಇದಾಗಿದೆ.