ಮಂಗಳೂರು, ಜು08(Daijiworld News/SS): ಸತ್ಯಸಮಾಚಾರ್ ವಾಮಂಜೂರು, ಯೇನಪೋಯ ಆಸ್ಪತ್ರೆಯ ಸಹಬಾಗಿತ್ವದಲ್ಲಿ ಸಂಘಟಿಸಿದ ಬ್ರಹತ್ ರಕ್ತದಾನ ಶಿಬಿರ ಹಾಗೂ ವಾಮಂಜೂರು ಜಮಾತ್ ಹಿರಿಯ ಕಬರ್ ಶ್ರಮದಾನಿಗಳಿಗೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ತಿರುವೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು.
ರಿಯಾಸ್ ವಾಮಂಜೂರ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಅಬ್ದುಲ್ ಕರೀಂ ಮದನಿ ವಾಮಂಜೂರು ಉದ್ಘಾಟಿಸಿದರು. ಅಡ್ವಕೇಟ್ ಇಲ್ಯಾಸ್ ಸ್ವಾಗತ ಭಾಷಣವನ್ನು ನೆರವೇರಿಸಿದರು. ವಾಮಂಜೂರು ಜುಮಾ ಮಸೀದಿ ಖತೀಬರಾದ ಬಹು ಮುಬಾರಕ್ ಹಸ್ಸನ್ ಸಖಾಫಿ ಪೂಂಜಾಲಕಟ್ಟೆ ಪ್ರಾಸ್ತಾವಿಕ ಭಾಷಣವನ್ನು ನಡೆಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ವೇಳೆ ವಾಮಂಜೂರು ಜಮಾತ್ ಹಿರಿಯ ಕಬರ್ ಶ್ರಮದಾನಿಗಳಾದ ಜನಾಬ್ ಸುಲೈಮಾನಾಕ ಜ್ಯೋತಿ ನಗರ ಮತ್ತು ಜನಾಬ್ ಬಾವಾಕ ಆಶ್ರಯ ನಗರ ಪರವಾಗಿ ಅವರ ಕಿರಿಯ ಪುತ್ರರಾದ ಜ.ಶಬೀರ್ ಆಶ್ರಯ ನಗರ ಇವರನ್ನು ಗೌರವ ಕಾಣಿಕೆಯ ಮೂಲಕ ಗೌರವಿಸಲಾಯಿತು.
ಜೊತೆಗೆ ಈ ಕಾರ್ಯಕ್ರಮದಲ್ಲಿ ಮೂಡುಶೆಡ್ಡೆಯ ಸರಕಾರಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅನುಷಾ. ಸಿಬಿಎಸ್ಇ ಸುಭೋದಯ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಪ್ರಖ್ಯಾತ ಶೆಟ್ಟಿ. ಮಂಗಳಜ್ಯೋತಿ ಇಂಟಿಗ್ರೇಟೆಡ್ ಶಾಲೆಯ ವಿದ್ಯಾರ್ಥಿ ಸಮಂತ್ ಪರವಾಗಿ ಅದ್ಯಾಪಕ ರಮೇಶ್ ಕುಮಾರ್. ಅಮೃತೇಶ್ವರ ಶಾಲೆಯ ವಿದ್ಯಾರ್ಥಿ ಪ್ರಾಣೇಶ್. ಸಂತ ರೇಮಂಡ್ ಶಾಲೆ ವಾಮಂಜೂರು ವಿದ್ಯಾರ್ಥಿನಿ ಕುಮಾರಿ ಮೈತ್ರಿ ಮತ್ತು ಕುಮಾರಿ ಐಶ್ವರ್ಯ, ಸಂತ ರೇಮಂಡ್ ಪಿಯು ಕಾಲೇಜ್ ವಿದ್ಯಾರ್ಥಿನಿ ಪಾತಿಮಾ ತನ್ವೀರ ಮೊದಲಾದವರಿಗೆ ಕಿರು ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ವಾಮಂಜೂರು ಜಮಾತ್ ಮಾಜಿ ಅದ್ಯಕ್ಷರಾದ ಜನಾಬ್ ಇಬ್ರಾಹಿಮ್ ಸಾಹೇಬ್, ಶ್ರೀ ವಿಕ್ಟರ್ ಸ್ಪ್ಯಾನಿ ಕುಟಿನ್ಹೋ ತಿರುವೈಲು ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷರು, ಶ್ರೀ ರೋಷನ್ ಎಂ ಕಾಮತ್ ಸುವದ್ ಇವೆಂಟ್ ಓರ್ಗನೈಸರ್. ಜನಾಬ್ ಖಾಸಿಂ ಮ್ಯಾನೇಜರು ಕಾರುಣ್ಯ ಸೌಹಾರ್ದ ಕೋ ಆಪ್ ಸೊಸೈಟಿ ಮಂಗಳೂರು, ಶ್ರೀ ಜನಾರ್ದನ ಸುವರ್ಣ ಅದ್ಯಕ್ಷರು ಎಸ್ ಡಿ ಎಂ ಸಿ.ಮೊದಲಾದವರು ಉಪಸ್ಥಿತರಿದ್ದರು.
ಬೃಹತ್ ರಕ್ತದಾನ ಶಿಬಿರವನ್ನು ಸತ್ಯಸಮಾಚಾರ್ ಸಾಮಾಜಿಕ ಸೇವಾ ಘಟಕ ಅದ್ಯಕ್ಷರಾದ ಜ.ರಿಯಾಸ್ ವಾಮಂಜೂರು ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು. ವಾಮಂಜೂರು ಖತೀಬ್ ಬಹು ಹಸ್ಸನ್ ಮುಬಾರಕ್ ಸಖಾಫಿ ರಕ್ತದಾನವನ್ನು ನೀಡುವ ಮೂಲಕ ಸತ್ಯಸಮಾಚಾರ್ ಸಮಾಜಿಕ ಸೇವೆಯ ಉತ್ಸಾಹಿ ತಂಡವನ್ನು ಅಬಿನಂಧಿಸಿದರು. ಈ ವೇಳೆ ಉದ್ಯಮಿ ಆರಿಫ್ ವಾಮಂಜೂರು ಹಾಗೂ ಅಡ್ವಕೇಟ್ ನಝೀರ್ ಎಕೆಎಂ ಉಪಸ್ಥಿತರಿದ್ದರು.
ಸತ್ಯಸಮಾಚಾರ್ ಸಾಮಾಜಿಕ ಸೇವಾ ಘಟಕ ವಾಮಂಜೂರು ಸಂಘಟಿಸಿದ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಿ ಸಹಕರಿಸಿದ ಎವರ್ ಗ್ರೀನ್ ಎಕ್ಸ್ಪೋರ್ಟ್ ಮಂಗಳೂರು. ಜನಾಬ್ ಉಸ್ಮಾನ್ ಗುರುಪುರ ಸನಾ ಡ್ರಸ್ಸಸ್ ಮಂಗಳೂರು, ಜನಾಬ್ ಅಬ್ದುಲ್ ರಶೀದ್ ಜಮಾತ್ ಅದ್ಯಕ್ಷರು ವಾಮಂಜೂರು, ಮುಹಮ್ಮದ್ ಸಾಹಿರ್ ಉಜಿರೆ, ಅಡ್ವಕೇಟ್ ನಝೀರ್ ಎಕೆಎಂ ವಾಮಂಜೂರು, ಆರಿಫ್ ಸ್ಪೋರ್ಟ್ಸ್ ವೇರ್ ಟ್ರೇಡರ್ ವಾಮಂಜೂರು, ರಜಾಕ್ ಸ್ಕೈ ಕೆಟರರ್ಸ್ ಎದುರುಪದವು, ಅಕ್ಬರ್ ಟಿಕ್ಕಾ ಪೋಯಿಂಟ್ ವಾಮಂಜೂರು, ಸಮೀರ್ ವಾಮಂಜೂರು.ರೋಯಲ್ ಫುಡ್ ಪೇಲೇಸ್ ವಾಮಂಜೂರು, ಮಂಗಳೂರು ಡೀಲರ್ಸ್, ಇಮ್ರಾನ್ ವಾಮಂಜೂರು ಹಾಗೂ ಕಾರ್ಯಕ್ರಮದ ಯಶಸ್ಸಿಗಾಗಿ ಅವಿರತವಾಗಿ ಶ್ರಮಿಸಿದ ಅಲ್ತಾಪ್ ಆಶ್ರಯ ನಗರ, ಶಾನವಾಸ್ ಆಶ್ರಯ ನಗರ ಶಬೀರ್ ಆಶ್ರಯ ನಗರ ಬದ್ರುದ್ದೀನ್ ವಾಮಂಜೂರು, ಶರೀಫ್ ವಾಮಂಜೂರು, ಜ.ಇಲ್ಯಾಸ್ ಬಜಪೆ ಪಿಎಫ್ಐ ಮೊದಲಾದವರಿಗೆ ವಂದಿಸಲಾಯಿತು.