ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಮಿಲ್ಕ್ ಬೂತ್ ಮತ್ತು ಹೊಟೇಲ್ಗೆ ನುಗ್ಗಿದ ಬಸ್
Mon, Jul 08 2019 04:19:40 PM
ಉಡುಪಿ, ಜು08(Daijiworld News/SS): ಚಾಲಕನ ನಿಯಂತ್ರಣ ತಪ್ಪಿದ ಬಸ್'ವೊಂದು ಮಿಲ್ಕ್ ಬೂತ್ ಹಾಗೂ ಹೊಟೇಲ್'ಗೆ ನುಗ್ಗಿದ ಘಟನೆಯೊಂದು ವರದಿಯಾಗಿದೆ.
ಖಾಸಗಿ ಬಸ್ಸೊಂದು ಮಿಲ್ಕ್ ಬೂತ್ ಹಾಗೂ ಹೊಟೇಲ್'ಗೆ ನುಗ್ಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕಡಿಯಾಳಿ ಜಂಕ್ಷನ್'ನಿಂದ ಉಡುಪಿ ಕಡೆ ಬರುತ್ತಿದ್ದ ಗಣೇಶ್ ಎಂಬ ಹೆಸರಿನ ಬಸ್ ಚಾಲಕನ ನಿಯಂತ್ರಣ ತಪ್ಪಿದ್ದು, ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಮಿಲ್ಕ್ ಬೂತ್ ಬಳಿ ಯಾರು ಗ್ರಾಹಕರು ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೂತ್'ನ ಸಿಬ್ಬಂದಿ ಸಣ್ಣಪುಟ್ಟ ಗಾಯಗಳಿಂದ ಪಾರಗಿದ್ದಾನೆ ಎಂದು ತಿಳಿದುಬಂದಿದೆ.