ಉಡುಪಿ, ಡಿ. 17 (DaijiworldNews/AK): ಪಡುಬಿದ್ರಿ ಬಳಿಯ ತೆಂಕ ಎರ್ಮಾಳ್ ಎಂಬಲ್ಲಿ ಸತ್ಯಂ ಬಾರ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸಾವನ್ನಪ್ಪಿದ್ದಾರೆ.

ಮೃತರನ್ನು ತೆಂಕ ಎರ್ಮಾಳ್ ನಿವಾಸಿ ಅಣ್ಣಯ್ಯ ಬಂಗೇರ (67) ಎಂದು ಗುರುತಿಸಲಾಗಿದೆ.
ಬಾದಾಮಿ ಮೂಲದ ಹಸನ್ ಎಂಬಾತ ಸುರತ್ಕಲ್ ಕಡೆಗೆ ಬೈಕ್ನಲ್ಲಿ ಹೋಗುತ್ತಿದ್ದಾಗ ಅಣ್ಣಯ್ಯ ಬಂಗೇರ ಹೆದ್ದಾರಿ ದಾಟುತ್ತಿದ್ದಾಗ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಅಣ್ಣಯ್ಯ ಬಂಗೇರ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಬೈಕ್ ಸವಾರ ಹಸನ್ ಕೂಡ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.
ಸಾಮಾಜಿಕ ಕಾರ್ಯಕರ್ತರಾದ ಕೆ.ಎಂ. ಸಿರಾಜ್, ಹಮೀದ್ ಮತ್ತು ಜಲಾಲುದ್ದೀನ್ ಅವರು ಗಾಯಾಳುಗಳನ್ನು ಉಚ್ಚಿಲದಿಂದ ಉಡುಪಿಯ ಆಸ್ಪತ್ರೆಗೆ ಎಸ್ಡಿಪಿಐ ಆಂಬ್ಯುಲೆನ್ಸ್ನಲ್ಲಿ ಸಾಗಿಸಲು ವ್ಯವಸ್ಥೆ ಮಾಡಿದರು. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.