ಉಡುಪಿ, ಜು 10 (DaijiworldNews/SM): ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ರಾಜೀನಾಮೆ ನೀಡಿಸಿ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಬಿಜೆಪಿ ನಡೆಸುತ್ತಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಬುಧವಾರದಂದು ಅಜ್ಜರಕಾಡು ಬಳಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ, ಹಿಂದೆ ಬಿಜೆಪಿಯ ಯಡಿಯೂರಪ್ಪನವರ ಸಮಯದಲ್ಲಿ ಇದ್ದ ಆಪರೇಷನ್ ಕಮಲದ ಚಟವನ್ನು ಬಿಜಿಪಿ ಇಂದಿಗೂ ಮುಂದುವರೆಸಿದೆ. ಬಿಜೆಪಿ ನಿರಂತರವಾಗಿ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದೆ. ಬಿಜೆಪಿಯ ಮುಖಂಡರು ಮಾತ್ರವಲ್ಲದೇ ರಾಷ್ಟ್ರೀಯ ನಾಯಕರಾದ ಅಮಿತ್ ಶಾ, ಮೋದಿ ಹಾಗೂ ಸಚಿವರಾಧ ಪಿಯೂಷ್ ಗೋಯೆಲ್ ಸಹಿತ ಇನ್ನೂ ಹಲವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಕರ್ನಾಟಕದ ರಾಜ್ಯಪಾಲರ ವಿರುದ್ದ ಹರಿಹಾಯ್ದ ಸೊರಕೆ, ಕರ್ನಾಟಕದ ರಾಜ್ಯಪಾಲರು ಕೂಡಾ ಇದರಲ್ಲಿ ಸೇರಿದ್ದಾರೆ. 1,000 ಕೋಟಿ ಮಿಕ್ಕಿ ಹಣವನ್ನು ಇದಕ್ಕಾಗಿ ಬೆಜೆಪಿ ವಿನಿಯೋಗಿಸಿಕೊಂಡು ದೇಶದ ಯಾವುದೇ ರಾಜ್ಯಗಳಲ್ಲಿ ಪ್ರತಿಪಕ್ಷ ಎಂಬುವುದು ಇರಬಾರದು ಎಂಬಂತೆ ಪ್ರಜಾಪ್ರಭುತ್ವದ ಕಗ್ಗೂಲೆಯನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.