ಉಡುಪಿ, ಡಿ. 17 (DaijiworldNews/TA): ವಿಧಾನ ಸಭಾ ಸ್ಪೀಕರ್ ವಿರುದ್ಧ ಮಾತನಾಡುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು, ಕ್ಷೇತ್ರದ ಜನರಿಗೆ ಏನು ಕೊಡುಗೆಯನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಪ್ರಶ್ನಿಸಿದ್ದಾರೆ. ಅವರು ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರಿಗೆ ವಿಚಾರವನ್ನು ಕೇಳುವ ಹಕ್ಕು ಇದೆ. ವಿಧಾನ ಸಭಾ ಸಮಯವನ್ನು ಕಾಪಾಡುವುದು ಸ್ಪೀಕರ್ ಅವರ ಕರ್ತವ್ಯ. ಯಾವ ವಿಚಾರ ಚರ್ಚಿಸಬೇಕೆಂದು ಸಭಾಪತಿಗಳು ಶಾಸಕರಿಗೆ ಪಾಠವನ್ನು ಹೇಳಿದ್ದಾರೆ.

ಮಾಧ್ಯಮದವರ ಹತ್ತಿರ ಬಂದು ಚಳಿ ಬಿಡಿಸುತ್ತೆನೆ ಎಂದು ಹೇಳಿದರೆ ಇದರ ಅರ್ಥ ಏನು? ಸಭಾಪತಿಯವರ ಚಳಿಯನ್ನು ಬಿಡಿಸುವ ತಾಕತ್ತು ನಿಮ್ಮಲ್ಲಿದಿಯಾ? ಎಂದು ನಮಗೆ ಬೇಕು. ನಿಮ್ಮಲ್ಲಿ ತಾಕತ್ತಿದ್ದರೆ ಅದನ್ನು ತೋರಿಸಿ. ಕೇವಲ ಬಾಯಿ ಮಾತಲ್ಲಿ ಹೇಳಿದ್ರೆ ಆಗುವುದಿಲ್ಲ. ವಿಧಾನ ಸಭೆಯಲ್ಲಿ ಚರ್ಚೆಯಾದ ವಿಚಾರ ವಿಧಾನ ಸಭೆಯಲ್ಲಿ ಮಾಡಬೇಕು.
ಹೊರಗಡೆ ಬಂದು ಚರ್ಚೆ ಮಾಡುವುದಲ್ಲ. ವಿಚಾರವನ್ನು ಮಾಧ್ಯಮದವರು ಹೊರಗಡೆ ಮುಟ್ಟಿಸುತ್ತಾರೆ. ಹರಿಕಥೆ ಎನ್ನುವುದು ಕರಾವಳಿಯ ಆಡುಭಾಷೆ. ತೊಂದರೆ ಏನು? ಇನ್ನೊಮ್ಮೆ ಗಲಾಟೆ ಎಬ್ಬಿಸಿ ಕಾಣಲು ಹೊರಟಿದ್ದೀರಾ? ಚುನಾವಣೆಯ ಸಂದರ್ಭದಲ್ಲಿ ಉಡುಪಿ ಜನತೆಗೆ ಪ್ರಣಾಳಿಕೆಯಲ್ಲಿ ನೀಡಿದ ಒಂದೇ ಒಂದು ಭರವಸೆ ಕೂಡ ಈಡೇರಿಸಲಿಲ್ಲ ಇದು ಖಂಡನೀಯ ಎಂದರು.